Friday, July 10, 2015

ಕಟೀಲಿನಲ್ಲಿ ವಾಟ್ಸಪ್ ಗ್ರೂಪ್ ಯಕ್ಷಮಿತ್ರ ವೇದಿಕೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಗೋವಿಂದ ಭಟ್, ಬಲಿಪ ನಾರಾಯಣ ಭಾಗವತ, ರಾಮ ಕುಲಾಲ್ರನ್ನು ಸಂಮಾನಿಸಲಾಯಿತು.

Friday, July 3, 2015

ಉಚಿತ ಯೋಗ ತರಬೇತಿ ಶಿಬಿರ

ವಿಶ್ವ ಯೋಗ ದಿನದ ಅಂಗವಾಗಿ ಪತಂಜಲಿ ಯೋಗ ಸಮಿತಿ ಮೂಡಬಿದಿರೆ ಸಂಯೋಜನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಒಂದು ವಾರದ ಉಚಿತ ಯೋಗ ತರಬೇತಿ ಶಿಬಿರವನ್ನು ದೇವಳದ ಮೊಕ್ತೇಸರ ವೇದಮೂರ್ತಿ ವಾಸುದೇವ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣರವರು ಆಶೀರ್ವಚನವಿತ್ತರು. ವೇದಿಕೆಯಲ್ಲಿ ಪತಂಜಲಿ ಯೋಗ ಸಮಿತಿ ಮೂಡಬಿದಿರೆ ವಲಯದ ಅಧ್ಯಕ್ಷರಾದ ಶ್ರೀ ಯು. ಪದ್ಮನಾಭ ಶೆಟ್ಟಿ, ಸಂಸ್ಥೆಯ ಪ್ರಾಚಾರ‍್ಯರಾದ ಪ್ರೊ. ಜಯರಾಮ ಪೂಂಜ ಹಾಗೂ ಯೋಗ ಮತ್ತು ನೈತಿಕ ಶಿಕ್ಷಣದ ನಿರ್ದೇಶಕರಾದ ಶ್ರೀ ಶಂಕರ ಮರಾಠೆ ಹಾಗೂ ಡಾ| ಕೇಶವ ಹೆಗ್ಡೆಯವರು ಉಪಸ್ಥಿತರಿದ್ದರು. ಬಾಬಾ ರಾಮ್‌ದೇವ್‌ಜೀರವರ ಶಿಷ್ಯರಾದ ಶ್ರೀ ಶರತ್ ಮತ್ತು ಶ್ರೀ ಹರಿಪ್ರಸಾದ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳು ಯೋಗತರಬೇತಿ ಕಾರ‍್ಯಾಗಾರದಲ್ಲಿ ಭಾಗವಹಿಸುವುದರೊಂದಿಗೆ ಯೋಗದ ಮಹತ್ವವನ್ನು ಪಡೆದುಕೊಂಡರು.
ಸಂಸ್ಥೆಯ ಪ್ರಾಚಾರ‍್ಯ ಸ್ವಾಗತಿಸಿ, ಉಪನ್ಯಾಸಕರಾದ ಡಾ| ಕೇಶವ ಹೆಗ್ಗಡೆಯವರು ಧನ್ಯವಾದವಿತ್ತರು. ಶ್ರೀಯುತ ಶಂಕರ ಮರಾಠೆಯವರು ಕಾರ‍್ಯಕ್ರಮ ನಿರ್ವಹಿಸಿದರು.

ನೂತನ ಗೋಶಾಲೆ ಕಾಮಧೇನು

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ನೂತನ ಗೋಶಾಲೆ ಕಾಮಧೇನು ಉದ್ಘಾಟನೆಗೊಂಡಿತು. ಅನಂತ ಆಸ್ರಣ್ಣ, ಹರಿ ಆಸ್ರಣ್ಣ ಪ್ರಸಾದ ಆಸ್ರಣ್ಣ ವೇದವ್ಯಾಸ ತಂತ್ರಿ ವಿಜಯಕುಮಾರ್ ಮತ್ತಿತ್ತರರಿದ್ದರು. ಕಟೀಲು ಮಾಂಜದಲ್ಲಿ  ಈಗಾಗಲೇ ಏಳು ಎಕರೆಯಲ್ಲಿ ನಂದಿನಿ ಗೋಶಾಲೆ ನಡೆಯುತ್ತಿದೆ.

Wednesday, July 1, 2015

ಕಟೀಲು ಕಾಲೇಜು ಎನ್‌ಎಸ್‌ಎಸ್ ಉದ್ಘಾಟನೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೇ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ಈ ಸಾಲಿನ ಚಟುವಟಿಕೆಗಳ ಉದ್ಘಾಟನೆಯನ್ನು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡುವ ಮೂಲಕ ಕೆಂಚನಕೆರೆಯ ಯೋಗಸಾಧಕ ಜಯ ಶೆಟ್ಟಿಯವರು ಉದ್ಘಾಟಿಸಿದರು.
ಯೋಗದಿಂದ ಅನಾರೋಗ್ಯವನ್ನು ದೂರಮಾಡಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಜಯ ಶೆಟ್ಟಿ ಹೇಳಿದರು.
ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ, ಕಿನ್ನಿಗೋಳಿಯ ಉದ್ಯಮಿ ಶ್ರೀಕಾಂತ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯದರ್ಶಿಗಳಾದ ಪವಿತ್ರ ಕಾರ‍್ಯಕ್ರಮ ನಿರೂಪಿಸಿದರು. ಯಶ್ವಿತಾ ವಂದಿಸಿದರು.