Wednesday, October 8, 2014

ಕಟೀಲು ಹಿರಿಯ ಪ್ರಾಥಮಿಕ ಶಾಲೆ ವಿಭಾಗಮಟ್ಟಕ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರಂತೋಡು ಸುಳ್ಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲ್‌ಬ್ಯಾಡ್‌ಮಿಂಟಂನ್ ಸ್ಪರ್ಧೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಹುಡುಗರ ಹಾಗೂ ಹುಡುಗಿಯರ ತಂಡ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.

Saturday, October 4, 2014

katil temple : krishnapuraswami visit

katil temple : krishnapuraswami visit

ವಿಜಯಾ ಬ್ಯಾಂಕ್ ಛೇರ್‌ಮೆನ್ ಕೆ.ವಿ.ಕಣ್ಣನ್ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕ್ ಛೇರ್‌ಮೆನ್ ಕೆ.ವಿ.ಕಣ್ಣನ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಸ್ವಾಗತಿಸಿದರು. ಈ ಸಂದರ್ಭ ಜನರಲ್ ಮೆನೇಜರ್ ಕುಸುಮಾ ಬಿ.ಎಂ, ಉಡುಪಿ ಎಜಿಎಂ ಶಾಲಿನಿ ಶೆಟ್ಟಿ, ಎಜಿಎಂ ರಾಜಾರಾಂ ಶೆಟ್ಟಿ, ಕಟೀಲು ಶಾಖಾ ಪ್ರಬಂಧಕಿ ವಿನುತಾ ಪಿ.ವಿ., ಅಧಿಕಾರಿಗಳಾದ ದೀಪಾ ಶೆಟ್ಟಿ, ಲೋಕೇಶ್, ಆನಂದ್, ಅಜಿತ್ ಮತ್ತಿತರರಿದ್ದರು. 

ಕಟೀಲು ತಾಳಮದ್ದಲೆ ದಶಾಹ ಮಹಾಮಂತ್ರಾರ್ಣವ ಸಮಾರೋಪ

ಆಟ ಕೂಟಗಳಲ್ಲೂ ಕಲಾಸೇವೆ
ಕಟೀಲು : ಕಟೀಲು ಕ್ಷೇತ್ರ ಕೇವಲ ಆಟದಲ್ಲಷ್ಟೇ ಅಲ್ಲದೆ ತಾಳಮದ್ದಲೆಕೂಟಗಳಲ್ಲೂ ಉತ್ತೇಜನ, ಪ್ರೋತ್ಸಾಹದೊಂದಿಗೆ ಯಕ್ಷಗಾನ ಕಲಾಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಖ್ಯಾತ ವೈದ್ಯ ಡಾ.ಪದ್ಮನಾಭ ಕಾಮತ್ ಹೇಳಿದರು.
ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ನಡೆಯುತ್ತಿದ್ದ ತಾಳಮದ್ದಲೆ ಸಪ್ತಾಹದ ದಶಮಾನೋತ್ಸವ ಪ್ರಯುಕ್ತ ದಶಾಹ ಮಂತ್ರ ಮಹಾರ್ಣವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗಾನ ಪ್ರಸಂಗಕರ್ತ, ಸಂಯೋಜಕ, ಕಲಾವಿದ ವಾಸುದೇವ ರಂಗಾಭಟ್, ನಿರೂಪಕ ಶಿಕ್ಷಕ ವಾಸುದೇವ ಶೆಣೈಯವರನ್ನು ಸಂಮಾನಿಸಲಾಯಿತು. ಮೂಡುಬಿದ್ರೆಯ ನಾರಾಯಣ ಪಿ.ಎಂ, ರಾಜೇಶ ಚೌಟ, ಜಗದೀಶ ಶೆಟ್ಟಿ ಮಳವೂರು, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಡಾ.ಭಾಸ್ಕರಾನಂದ ಕುಮಾರ್ ಮತ್ತಿತರರಿದ್ದರು.
ಇತ್ತೀಚಿಗೆ ನಿಧನರಾದ ಕಲಾವಿದರಾದ ಕಡಂದೇಲು ಪುರುಷೋತ್ತಮ ಭಟ್ ಹಾಗೂ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಸ್ಮರಣೆಯನ್ನು ಮಾಡಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಶ್ರದ್ಧಾಂಜಲಿ ಅರ್ಪಿಸಿದರು.
ಆಡಳಿತಾಧಿಕಾರಿ ನಿಂಗಯ್ಯ ಸ್ವಾಗತಿಸಿದರು. ಕಮಲಾದೇವಿಪ್ರಸಾದ ಆಸ್ರಣ್ಣ ತಾಳಮದ್ದಲೆ ದಶಾಹದ ಬಗ್ಗೆ ಮಾತನಾಡಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ವಂದಿಸಿದರು. ಭಾನುವಾರ ದಿನವಿಡೀ ರಾಮಾಂಜನೇಯ ಕಾಳಗ ಹಾಗೂ ಭೀಷ್ಮಾರ್ಜುನ ತಾಳಮದ್ದಲೆ ನಡೆಯಿತು.

ಮಹಾನವಮಿ, ವಿಜಯದಶಮಿ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಹಾನವಮಿಯ ಶುಕ್ರವಾರ ದಾಖಲೆಯ ಜನಜಾತ್ರೆ ಸೇರಿತ್ತು. 1752ವಾಹನ ಪೂಜೆ, 7957 ಹೂವಿನ ಪೂಜೆ 25ರಿಂದ 30ಸಾವಿರದಷ್ಟು ಮಂದಿ ಅನ್ನಪ್ರಸಾದ  ಹಾಗೂ ಕಡುಬು ಸ್ವೀಕರಿಸಿದ್ದು, 80ಸಾವಿರದಷ್ಟು ಭಕ್ತರು ದೇಗುಲಕ್ಕೆ ಆಗಮಿಸಿದ್ದರು. ವಿಜಯ ದಶಮಿಯ ಶನಿವಾರವೂ ಭಕ್ತರು ದೊಡ್ಡ ಸಂಖ್ಯೆಯಲ್ಲೇ ಭೇಟಿ ನೀಡಿದ್ದು, ನೂರಾರು ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು.

Friday, October 3, 2014

ಕಟೀಲು ದೇಗುಲದಲ್ಲಿ ಮಹಾನವಮಿಯಂದು ಜನಜಾತ್ರೆ





ಕಟೀಲು ದೇಗುಲದಲ್ಲಿ ಮಹಾನವಮಿಯಂದು(ಅ.3) ಜನಜಾತ್ರೆ
1700ರಷ್ಟು ವಾಹನ ಗಳಿಗೆ ವಾಹನ ಪೂಜೆ ನಡೆದರೆ 7100ರಷ್ಟು ಹೂವಿನ ಪೂಜೆ ನಡೆಯಿತು. 35ಸಾವಿರಕ್ಕೂ ಹೆಚ್ಚು ಜನ ದೇಗುಲಕ್ಕೆ ಭೇಟಿ ನೀಡಿದರು.