Friday, December 6, 2013

ಧ್ವಜಸ್ಥಂಭ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಕೊಡುಗೆಯಾಗಿ ನೀಡುವ ಧ್ವಜಸ್ತಂಭಕ್ಕೆ ಸುಳ್ಯದ ಮಿತ್ತೂರು ಉಬರಡ್ಕದ ರಾಮಮೋಹನ ಭಟ್ ಎಂಬವರ ತೋಟದಿಂದ ಮರವನ್ನು ವೈಭವದ ಮೆರವಣಿಗೆಯಲ್ಲಿ ಶುಕ್ರವಾರ ತರಲಾಯಿತು.
ಡಿ.5ರಂದು ಹೊರಟ ಮೆರವಣಿಗೆ ಪುತ್ತೂರು, ಬಂಟ್ವಾಳ, ಮಂಗಳೂರು ಮೂಲ್ಕಿ ತಲುಪಿ, ಶುಕ್ರವಾರ ಡಿ.6ರ ಸಂಜೆ ಹೊತ್ತಿಗೆ ಕಟೀಲಿಗೆ ತರಲಾಯಿತು.
ಸುಮಾರು ೫ಲಕ್ಷ ರೂ. ವೆಚ್ಚದ ಈ ಮರದಿಂದ ಮುಂದಿನ ಎರಡು ವರ್ಷದೊಳಗೆ ಹೊಸ ಧ್ವಜಸ್ಥಂಭವನ್ನು ನಿರ್ಮಿಸಲಾಗುವುದು. ಈಗಿರುವ

ಧ್ವಜಸ್ಥಂಭವನ್ನು ೧೯೭೦ರಲ್ಲಿ ಪ್ರತಿಷ್ಟಾಪಿಸಲಾಗಿದ್ದು ಅದನ್ನು ಪುತ್ತೂರು ಪಾಣಾಜೆಯಿಂದ ತರಲಾಗಿತ್ತು. ಈಗಿನದ್ದು ಬೆಳ್ಳಿಯ ಧ್ವಜಸ್ತಂಭವಾಗಿದ್ದು ಮುಂದಕ್ಕೆ ಹೊಸ ಧ್ವಜಸ್ಥಂಭಕ್ಕೆ ಭಕ್ತರ ಸಹಕಾರದಿಂದ ಬೆಳ್ಳಿಯ ತಗಡಿಗೆ ೪.೫ಕೆಜಿ ಚಿನ್ನವನ್ನು ಹೊದಿಸಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ದೇಗುಲದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ವೇಂಕಟರಮಣ, ಅನಂತಪದ್ಮನಾಭ, ಕಮಲಾದೇವಿ ಪ್ರಸಾದ, ಶ್ರೀಹರಿನಾರಾಯಣ, ಕುಮಾರ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಕೊಡೆತ್ತೂರು ಮಾಗಂದಡಿ ಕುಟುಂಬದ ಪ್ರಮುಖರಾದ ಬಿ.ಆರ್.ಶೆಟ್ಟಿ, ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

Sunday, December 1, 2013

ಕಟೀಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕಟೀಲು : ನಮ್ಮ ಪುರಾಣ, ಇತಿಹಾಸ, ಸಂಸ್ಕೃತಿಗಳನ್ನು ಮಕ್ಕಳಿಗೆ ತಿಳಿಸುವ ಜೊತೆಗೆ ಸಂಸ್ಕಾರವಂತರನ್ನಾಗಿ ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಕಟೀಲು ದೇವಳದ ಅರ್ಚಕ ಕಮಲದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕ್ ಪ್ರಬಂಧಕ ರತ್ನಾಕರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ಜಲಜ.ಎಸ್, ಮೆನ್ನಬೆಟ್ಟು ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಶಾಲೆಯ ಹಳೆ ವಿದ್ಯಾರ್ಥಿಗಳಾದ ಕಿರಣ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಸಿ.ಆರ್.ಪಿ. ಜಗದೀಶ್ ನಾವಡ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗ್ಡೆ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರಾದ ಸರೋಜಿನಿ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ವೈ ಮಾಲತಿ ವಾರ್ಷಿಕ ವರದಿ ನೀಡಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ


ಕಟೀಲು : ಇಂದಿನ ನಗರದ ಶಿಕ್ಷಣ ಟ್ಯೂಷನ್ ಮತ್ತು ಟೆನ್‌ಶನ್ ಸಹಿತವಾಗಿಯೇ ಇದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕಾರಭರಿತ ನೈತಿಕ ಶಿಕ್ಷಣ ಸಿಗುತ್ತಿದೆ ಆಗಬೇಕು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಮ್.ಬಿ. ಪುರಾಣಿಕ್, ಕಟೀಲು ದೇವಳ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ,ಶಾಲಾ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಈಶ್ವರ್ ಕಟೀಲ್, ವಿದ್ಯಾರ್ಥಿ ನಾಯಕಿ ಅನುಜ್ಞಾ ಭಟ್ ಮತ್ತಿತರರಿದ್ದರು. ಯುವಜನ ಸೇವಾ ಮತ್ತು ಮೀನುಗಾರಿಕೆ ಸಚಿವ ಕೆ ಅಭಯಚಂದ್ರ ಜೈನ್ ಹಾಗೂ ನಿವೃತ್ತ ಉಪಪ್ರಾಚಾರ್ಯ, ಸಾಹಿತಿ ಉಮೇಶ್ ರಾವ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಶಾಲಾ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಪ್ರಾಚಾರ್ಯ ಜಯರಾಮ ಪೂಂಜ ಸ್ವಾಗತಿಸಿದರು. ವಿಜಯಾ ಆಳ್ವ ವಂದಿಸಿದರು. ಭಾರತಿ ಶೆಟ್ಟಿ, ಕವಿತಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Tuesday, November 26, 2013

ಕಟೀಲು ಪ್ರಮೋದ್ ಮುತಾಲಿಕ್ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಶ್ರೀ ರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮಂಗಳವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Sunday, November 24, 2013

katilige shilpa shetty beti


ದೀಪೋತ್ಸವ

ಕಟೀಲು ಶ್ರೀ ದುರ್ಗಾಪರಮೇಶದ್ವರೀ ದೇಗುಲದಲ್ಲಿ ದೀಪೋತ್ಸವ ನಡೆದ ಸಂದರ್ಭ ಹಣ್ಣುಗಳು, ತರಕಾರಿಗಳಿಂದ ನಿರ್ಮಿಸಿದ ಮಂಟಪದಲ್ಲಿ ದೇವರನ್ನು ಪೂಜಿಸಲಾಯಿತು. (ಸ.೨೨)
ಚಿತ್ರ ಕಟೀಲ್ ಸ್ಟುಡಿಯೋ

Friday, November 8, 2013

ಕಟೀಲು ಆರನೆಯ ಮೇಳ ಉದ್ಘಾಟನೆ

ದೇವೀ ಭಕ್ತಿ, ಕಲಾ ಪ್ರೀತಿಯಿಂದ ಸಂಸ್ಕೃತಿಯ ಉಳಿವು-ಪೇಜಾವರ ಶ್ರೀ
ಕಟೀಲು : ಯಕ್ಷಗಾನ ಪ್ರಪಂಚದ ಅದ್ಭುತವೆನಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಆರನೆಯ ಮೇಳದ ಉದ್ಘಾಟನೆ ಹಾಗೂ ಎಲ್ಲ ಮೇಳಗಳ ಈ ವರುಷದ ತಿರುಗಾಟದ ಆರಂಭ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಸಂಜೆ ಕ್ಷೇತ್ರದ ಅರ್ಚಕರಾದ ಆಸ್ರಣ್ಣ ಬಂಧುಗಳಾದ ವಾಸುದೇವ, ಅನಂತಪದ್ಮನಾಭ, ವೆಂಕಟರಮಣ, ಕಮಲಾದೇವೀ ಪ್ರಸಾದ, ಶ್ರೀಹರಿನಾರಾಯಣದಾಸ, ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ದೇಗುಲದ ತಂತ್ರಿಗಳಾದ ವೇದವ್ಯಾಸ ತಂತ್ರಿ ಸೇರಿದಂತೆ ನೂರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ದೇವರ ಸಮ್ಮುಖದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಆರೂ ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಿದರು. ಇದಕ್ಕಿಂತ ಮೊದಲು ಮೇಳದ ಭಾಗವತರಾದ ಪದ್ಯಾಣ ಗೋವಿಂದ ಭಟ್, ಬಲಿಪ ಪ್ರಸಾದ ಭಟ್, ಗೋಪಾಲಕೃಷ್ಣ, ಮಯ್ಯ,  ಕುಬಣೂರು ಶ್ರೀಧರ ರಾವ್, ಪಟ್ಲ ಸತೀಶ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಹಿಮ್ಮೇಳ ಕಲಾವಿದರಿಂದ ದೇವರ ಎದುರು ತಾಳಮದ್ದಲೆ ನಡೆಯಿತು. ಬಳಿಕ ಸರಸ್ವತೀ ಸದನದಲ್ಲಿ ಮೇಳದ ದೇವರಿಗೆ ಮುನ್ನೂರು ಕಲಾವಿದರ ಉಪಸ್ಥಿತಿಯಲ್ಲಿ ಚೌಕಿಪೂಜೆ ನಡೆಯಿತು.
ಉದ್ಘಾಟನೆ
ಪೇಜಾವರ ಮಠದ ಶ್ರೀ ವಿಶ್ವೇಶತೀಥ ಸ್ವಾಮೀಜಿ ಶ್ರೀ ದೇವೀ ಭಕ್ತಿ ಹಾಗೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಕಟೀಲಿನಲ್ಲಿ ಯಕ್ಷಗಾನ ಮೇಳಗಳು ಆರಕ್ಕೇರಿವೆ. ಆ ಮೂಲಕ ಸಂಸ್ಕೃತಿಯ ಔನತ್ಯವನ್ನು ಹೆಚ್ಚಿಸಿದಂತಾಗಿದೆ. ಈ ಕಾಲದಲ್ಲೂ ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ. ಕಲೆಯ ಬಗೆಗಿನ ಪ್ರೀತಿ ಹೆಚ್ಚಾಗಿದೆ ಎಂದು ಹೇಳಬಹುದು. ಧರ್ಮ ಪ್ರಸಾರದ ಜೊತೆಗೆ ಒಳಿತನ್ನು ಸಾರುವ ಯಕ್ಷಗಾನ ಎಂದರೆ ಅದು ದೇವರಿಗೆ ಮಾಡುವ ನೃತ್ಯ, ಸಂಗೀತ ಆರಾಧನೆ. ಯಕ್ಷಗಾನ ಮೇಳಗಳಿಗೆ ಕಟೀಲು ಸೇನಾಧಿಪತಿಯಂತೆ ಇದೆ. ಅನೇಕ ಮೇಳಗಳಿಗೆ ಆಟಗಳು ಸಿಗುವುದಿಲ್ಲ. ಆದರೆ ಕಟೀಲು ಮೇಳಗಳಿಗೆ ಪುರುಸೊತ್ತೇ ಇಲ್ಲ ಎಂಬ ಸ್ಥಿತಿ.ಭಕ್ತರ ಹೃದಯ ರಂಗಸ್ಥಳದಲ್ಲಿ ಕಲೆ ಮತ್ತು ದೇವರು ಯಕ್ಷಗಾನದ ಮೂಲಕ ಸ್ಥಿರವಾಗಿ ನಿಲ್ಲುವಂತಾಗಲಿ. ಕಟೀಲಿನಲ್ಲಿ ಆಟ, ಊಟ, ಪಾಠದ ಕಾರ‍್ಯಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು,

ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಲತಿ ಮೊಯ್ಲಿ ಆರನೆಯ ಮೇಳ ಉದ್ಘಾಟಿಸಿದರು. ಡಾ.ವೀರೇಂದ್ರ ಹೆಗ್ಗಡೆ, ಸಚಿವ ವಿನಯಕುಮಾರ ಸೊರಕೆ, ಮಾಣಿಲ ಸ್ವಾಮೀಜಿ, ಸಾಂಸದ ನಳಿನ್ ಕುಮಾರ್, ಆಸ್ರಣ್ಣ ಬಂಧುಗಳು ವೇದಿಕೆಯಲ್ಲಿದ್ದರು. ಮಳೆಗಾಲದಲ್ಲೂ ಕಾಲಮಿತಿಯ ಮೇಳ ಆರಂಭವಾಗಲಿದ್ದು, ೭೦ವರ್ಷ ಮೀರಿದವರು ಆಟ ನೋಂದಾಯಿಸಿದರೆ ಕೂಡಲೇ ಅವಕಾಶ ನೀಡಲಾಗುವುದು. ೮೫೦೦ಯಕ್ಷಗಾನ ಮುಂಗಡ ನೋಂದಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಹತ್ತು ಮೇಳಗಳನ್ನು ಮಾಡುವ ಮನಸ್ಸು ಇದೆ ಎಂದು ಅಜಿತ್ ಕುಮಾರ ಹೆಗ್ಡೆ ಹೇಳಿದರು. ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.
photo by katil studio

Monday, November 4, 2013

katil yakshagana melagala tirugata mattu 6neya mela udgatane




ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಗಳ ಈ ವರುಷದ ತಿರುಗಾಟ ಆರಂಭ ಹಾಗೂ ಆರನೆಯ ಮೇಳದ ಉದ್ಘಾಟನೆ 8-11-2013ರಂದು ನಡೆಯಲಿದೆ. ಆರನೆಯ ಯಕ್ಷಗಾನ ಮೇಳ ಒಂದೇ ಕ್ಷೇತ್ರದಿಂದ ಹೊರಡುತ್ತಿರುವುದು ಗಿನ್ನಿಸ್ ದಾಖಲೆಯೇ ಸರಿ.

ಕಡಂದೇಲು ಪುರುಷೋತ್ತಮ ಭಟ್ಟರಿಗಿಂದು ಗೌರವ



ಈಗಿರುವ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿರುವ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ನೂರರ ಆಸುಪಾಸಿನಲ್ಲಿರುವ ಕಡಂದೇಲು ಪುರುಸೋತ್ತಮ ಭಟ್ಟರಿಗೆ ಇಂದು(ತಾ.೫) ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿರುವ ಶಾಂತಿಹೋಮಹವನಾಧಿಗಳ ಜೊತೆಗೆ ಗೌರವ ನಡೆಯಲಿದೆ. ಪೇಜಾವರ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶರು ಭಾಗವಹಿಸಲಿದ್ದಾರೆ.
ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ. ಮೂಲ್ಕಿ ಕೊರಕ್ಕೋಡು, ಕೂಡ್ಲು, ಇರಾ ಕುಂಡಾವು ಮೇಳಗಳಲ್ಲಿ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯಲ್ಲಿ ೧೯೪೩ರಲ್ಲಿ ಐದು ದಿನದ ದೇವಿ ಮಹಾತ್ಮೆ ನಡೆದಾಗ ದೇವೀ ಪಾತ್ರಧಾರಿಯಾಗಿ ಪ್ರಸಿದ್ಧಿಗೆ ಬಂದವರು. ಇವತ್ತಿಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುವ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. ೧೯೭೦ ರ ಮೇ ೨೫ ರಂದು ಮೇಳಕ್ಕೆ ವಿದಾಯ ಹೇಳಿದರು. ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖಷಿಪಟ್ಟುಕೊಳ್ಳುವ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರಿಗೆ ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಇವತ್ತಿಗೂ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜ. ಅವರಿಗಿಂದು ಕಟೀಲಿನಲ್ಲಿ ಶಾಂತಿ ಹೋಮಹವನಗಳ ಜೊತೆಗೆ ಕುಟುಂಬದ, ಅಭಿಮಾನಿಗಳ ಆತ್ಮೀಯ ಗೌರವ ಸಲ್ಲಲಿದೆ.



Friday, October 25, 2013

ಕಟೀಲಿನಲ್ಲಿ ಕಲಾಪರ್ವ

ಮಕ್ಕಳಲ್ಲಿ ಸಂಸ್ಕಾರದ ನಿರ್ಮಾಣ -ಅಜಿತ್ ಕುಮಾರ ಹೆಗ್ಡೆ
ಕಟೀಲು : ಯಕ್ಷಗಾನ ಪ್ರದರ್ಶನಗಳಿಗೆ ಹೋದರೆ ಅಲ್ಲಿ ವಯೋವೃದ್ಧರೇ ಕಾಣುತ್ತಾರೆ. ಯುವಕರ ಸಂಖ್ಯೆ ಕಡಿಮೆ ಕಾಣುತ್ತದೆ. ಮೊಬೈಲು, ಫೇಸುಬುಕ್ಕುಗಳಲ್ಲಿ ಮುಳುಗಿ ಹಾದಿತಪ್ಪುತ್ತಿರುವ ಮಕ್ಕಳಲ್ಲಿ ಯಕ್ಷಗಾನಾಸಕ್ತಿಯನ್ನು ಬೆಳೆಸಿದರೆ ಕಲಾವಿದರ ಜೊತೆಗೆ ಪ್ರೇಕ್ಷಕರ ಸಂಖ್ಯೆಯನ್ನೂ ಹೆಚ್ಚಿಸಿದಂತಾಗುತ್ತದೆ. ಅವರಲ್ಲಿ ಸಂಸ್ಕಾರವನ್ನು ನಿರ್ಮಿಸಿದಂತಾಗುತ್ತದೆ. ಕಟೀಳಿನ ದುರ್ಗಾ ಮಕ್ಕಳದ್ದು ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಮಕ್ಕಳ ಯಕ್ಷಗಾನ ಮೇಳಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದು ಸಮಾಧಾನಕರ ಎಂದು ಮಂಗಳೂರು ಮಹಾನಗರ ಪಾಳಿಕೆ ಆಯುಕ್ತ, ಕಟೀಲು ದೇಗುಲದ ಆಡಳಿತಾಧಿಕಾಇರ ಶಾನಾಡಿ ಅಜಿತ್ ಕುಮಾರ ಹೆಗ್ಡೆ ಹೇಳಿದರು.
ಅವರು ಭಾನುವಾರ ರಾತ್ರಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಐದನೆ ವರ್ಷದ ಕಲಾಪರ್ವದಲ್ಲಿ ಮಾತನಾಡಿದರು.
ಮುಂಬೈನ ಜ್ಯೋತಿಷಿ ಪೆರ್ಣಂಕಿಲ ಹರಿದಾಸ ಭಟ್ ಮಾತನಾಡಿ ರಾಮ ರಾವಣವನ್ನು ಕೊಂದರೆ, ಕೃಷ್ಣ ಕಂಸನನ್ನು, ದುರ್ಗಾಸುರನನ್ನು ದುರ್ಗೆ, ಮಹಿಷಾಸುರನ್ನು ಮಹಿಷಮರ್ಧಿನಿ, ರಕ್ತಬೀಜನನ್ನು ರಕ್ತೇಶ್ವರೀ, ಗಾಂಧಿಯನ್ನು ಗೋಡ್ಸೆ, ಒಸಾಮಾನನ್ನು ಒಬಾಮಾ ಹೀಗೆ ಆಯಾಯ ಅಕ್ಷರದವರೇ ಶತ್ರುಗಳಾಗಿರುವ ವಿಚಾರಗಳನ್ನು ಅಧ್ಯಯನದಿಂದ ಗಮನಿಸಬಹುದು. ಶುದ್ಧ ಕನ್ನಡವನ್ನು ಯಕ್ಷಗಾನದಿಂದ ಮಾತಾಡಬಹುದು ಎಂದು ಹೇಳಿದರು.
ಕಲಾವಿದ ಮಂಜೇಶ್ವರ ಜನಾರ್ದನ ಜೋಗಿಯವರನ್ನು ಹತ್ತು ಸಾವಿರ ರೂ.. ನಗದು ಸಹಿತ ಸಂಮಾನಿಸಲಾಯಿತು. ಯಕ್ಷಗಾನೀಯ ಶೈಲಿಯಲ್ಲಿ ಬಲಿಪ ಶಿವಶಂಕರ ಭಟ್ ಸಂಮಾನಪತ್ರ ವಾಚಿಸಿದರು.
ಪ್ರಸಂಗಕರ್ತ ಶ್ರೀಧರ ಡಿ.ಎಸ್. ಮತ್ತು ಯಕ್ಷಗಾನ ವಿಮರ್ಶಕ ಕೆ.ಎಲ್.ಕುಂಡಂತಾಯರನ್ನು ಗೌರವಿಸಲಾಯಿತು. ಇದೇ ಸಂದರ್ಭ ಯಕ್ಷಗಾನ ಶಿಕ್ಷಣ ಪಡೆದ ವಿದ್ಯಾರ್ಥೀಗಳಿಗೆ ಪ್ರಮಾಣಪತ್ರ ವಿತರಣೆ, ಯಕ್ಷಗಾನ ಪ್ರತಿಭಾ ಪುರಸ್ಕಾರ, ಗುರುವಂದನೆ ನಡೆಯಿತು.
ಸಚಿವ ಅಭಯಚಂದ್ರ ಜೈನ್, ಸೂರ್‍ಯನಾರಾಯಣ ಉಪಾಧ್ಯಾಯ, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಅಜಿತ್ ಕುಮಾರ ಹೆಗ್ಡೆ, ಡಾ.ಪದ್ಮನಾಭ ಕಾಮತ್, ಅಜಿತ್ ಕುಮಾರ ಹೆಗ್ಡೆ, ಬಿ.ಟಿ.ಬಂಗೇರ, ತಲ್ಲೂರು ಶಿವರಾಮ ಶೆಟ್ಟಿ, ಮರವೂರು ಜಗದೀಶ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅಶೋಕ ಶೆಟ್ಟಿ, ಗಣೇಶ ಶೆಟ್ಟಿ, ಲೀಲಯ್ಯ ಶೆಟ್ಟಿಗಾರ, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು. ಶ್ರೀ ದುರ್ಗ ಮಕ್ಕಳ ಮೇಳದವರಿಂದ ನೂರನೇ ಪ್ರದರ್ಶನವಾದ ರಾಮಲಕ್ಷ್ಮಣರ ಒಡ್ಡೋಲಗ ಸಹಿತವಾದ ಪಂಚವಟಿ ಪ್ರದರ್ಶನಗೊಂಡಿತು.

ಅಂಬರೀಷ್ ಭೇಟಿ

ಕಟೀಲು ಶ್ರೀ ದುಗಾಱಪರಮೆಶ್ವರೀ ದೇವಸ್ಥಾನಕ್ಕೆ ನಟ, ಸಚಿವ ಅಂಬರೀಷ್ ಭೇಟಿ ಕೊಟ್ಟ ಸಂದರ್ಭ ಅರ್ಚಕರಾದ ವಾಸುದೇವ ಆಸ್ರಣ್ಣ, ಹರಿ ಆಸ್ರಣ್ಣ, ಆಡಳಿತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಇದ್ದರು

Monday, October 7, 2013

katil temple navaratri





ನವರಾತ್ರಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ



ನವರಾತ್ರಿ ಪ್ರಯುಕ್ತ ನೃತ್ಯ ವೈವಿಧ್ಯ, ಹರಿಕಥೆ ನಡೆದವು.

Thursday, September 26, 2013

ಕಟೀಲಿನಲ್ಲಿ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್

ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಪ್ರಯುಕ್ತ ಕಟೀಲು ದೇವಸ್ಥಾನ ಹಾಗೂ ದ.ಕ.ಜಿಲ್ಲಾ ಬಾಲ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ
ರಾಜ್ಯ ಮಟ್ಟದ ಸಬ್ ಜೂನಿಯರ್ ಬಾಲ್ ಬ್ಯಾಡ್‌ಮಿಂಟನ್ ಲೀಗ್ ಚಾಂಪಿಯನ್‌ಶಿಪ್ ಪಂದ್ಯಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡಗಳು ವಿಜೇತರಾಗಿ ಪ್ರಥಮ ಪ್ರಶಸ್ತಿ ಪಡೆದವು.
ಉಳಿದಂತೆ ಬಾಲಕರ ವಿಭಾಗದಲ್ಲಿ ಜಯ ಸ್ಪೋರ್ಟ್ಸ್ ಬೆಂಗಳೂರು, ಶರಣಾಂಬ ಪ್ರೌಢಶಾಲೆ ಹೊನ್ನುಡಿಕೆ ತುಮಕೂರು ಹಾಗೂ ಮೂಡುಗಿಳಿಯಾರು ಕೋಟ ತಂಡಗಳು ಅನಂತರದ ಸ್ಥಾನ ಪಡೆದವು.
ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಎಸ್‌ಬಿಬಿಸಿ, ಪಾಂಡವಪುರ ತಂಡಗಳು ದ್ವಿತೀಯ, ತೃತೀಯ ಸ್ಥಾನ ಪಡೆದವು.
ಮೂಡುಬಿದ್ರೆಯ ಲಾವಣ್ಯ ಹಾಗೂ ನಿಶಾಂತ್ ವೈಯಕ್ತಿಕ ಪ್ರಶಸ್ತಿ ಪಡೆದರು. ಇದೇ ಸಂದರ್ಭ ಉತ್ತಮ ಸಾಧನೆಗೈದ ಆಟಗಾರರನ್ನು ಗುರುತಿಸಿ ರಾಷ್ಟ್ರಮಟ್ಟದ ಬಾಲ್‌ಬ್ಯಾಡ್‌ಮಿಂಟನ್‌ಗೆ ರಾಜ್ಯತಂಡವನ್ನು ಆಯ್ಕೆಗೊಳಿಸುವ ತರಬೇತಿಗೆ ಆರಿಸಲಾಯಿತು.
ಉತ್ತಮ ಸಾಧನೆಗೈದ ಮೂಡುಗಿಳಿಯಾರಿನ ಚಿತ್ರಾ, ಸುರೇಖಾ, ಜಯ ಸ್ಪೋರ್ಟ್ಸ್‌ನ ಪಲ್ಲವಿ, ಹೊನ್ನುಡಿಕೆಯ ಕಾವ್ಯ, ಆಳ್ವಾಸ್‌ನ ಕಾವ್ಯ, ಕಟೀಲಿನ ಹರ್ಷಿತ್, ಕಾರ್ತಿಕ್, ತುಮಕೂರಿನ ಪವನ್, ಪಾಂಡವಪುರದ ಶರತ್, ಪ್ರಜ್ವಲ್‌ರಿಗೆ ನಗದು ಬಹುಮಾನ ನೀಡಲಾಯಿತು.
ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರೌಢಶಾಲೆಯ ಉಪಪ್ರಾಚಾರ‍್ಯ ಸುರೇಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣದಾಸ ಆಸ್ರಣ್ಣ, ಧನಂಜಯ ಶೆಟ್ಟಿಗಾರ್, ಕರ್ನಾಟಕ ಬಾಲ್ ಬ್ಯಾಡ್‌ಮಿಂಟನ್ ಸಂಸ್ಥೆಯ ದಿನೇಶ್, ಮರವೂರುಬೀಡು ಬಾಬು ಶೆಟ್ಟಿ, ಶಿವಣ್ಣ, ಪ್ರವೀಣ್ ಕುಮಾರ್ ಮುಂತಾದವರಿದ್ದರು.
ಶನಿವಾರ ಸಚಿವ ಅಭಯಚಂದ್ರ, ಕಟೀಲು ದೇಗುಲದ ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ಸಂಜೀವಿನಿ ಚಾರಿಟೇಬಲ್ ಟ್ರಸ್ಟ್‌ನ ಡಾ| ಸುರೇಶ್ ರಾವ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಮಾಲಾಡಿ ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಕುಮಾರ್, ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತ ಮಹಾದೇವ, ಉದ್ಯಮಿಗಳಾದ ಯಾದವಕೋಟ್ಯಾನ್, ಗಿರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಸಂದೀಪ್ ಶೆಟ್ಟಿ, ರಾಜ್ಯ ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಪ್ರಕಾಶ್ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ರಾಜರಾವ್, ಕಾರ್ಯದರ್ಶಿ ದಿನೇಶ್, ಕೋಶಾಧಿಕಾರಿ , ದ.ಕ. ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಮಹಮ್ಮದ್ ಇಲ್ಯಾಸ್, ಮತ್ತಿತರರ ಉಪಸ್ಥಿತಿಯಲ್ಲಿ ಪಂದ್ಯಕೂಟ ಉದ್ಘಾಟನೆಗೊಂಡಿತ್ತು. ರಾಜ್ಯದ ವಿವಿಧ ಶಾಲೆಗಳ ಬಾಲಕರ, ಬಾಲಕಿಯರ ೪೫ ತಂಡಗಳು ಭಾಗವಹಿಸಿದ್ದವು.

ದ.ಕ. ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್ : ಕಟೀಲು ಹಿ. ಪ್ರಾ. ಶಾಲೆಗೆ ಪ್ರಶಸ್ತಿ


ಮಂಗಳೂರು ಶಕ್ತ್ತಿನಗರದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್ ೧೪ರ ವಯೋಮಿತಿಯ ಪಂದ್ಯಕೂಟದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ, ಬಾಲಕಿಯರ ತಂಡ ದ್ವಿತೀಯ ಪ್ರಶಸ್ತಿ ಪಡೆದಿದೆ. ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕಿ ಮಾಲತಿ ಹಾಗೂ ದೈಹಿಕ ಶಿಕ್ಷಕ ಕೃಷ್ಣ

Sunday, August 25, 2013

ಕಟೀಲು: ಚಿನ್ನದ ರಥಕ್ಕೆ ಸ್ವರ್ಣ ಮುಹೂರ್ತ, ಕುದ್ರು ಅಭಿವೃದ್ಧಿಗೆ ಚಾಲನೆ


ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಚಿನ್ನದ ರಥಕ್ಕೆ ಸ್ವರ್ಣಮುಹೂರ್ತವನ್ನು ಸಚಿವ ರಮಾನಾಥ ರೈ ನೆರವೇರಿಸಿದರು.
ರಾಜ್ಯದಲ್ಲೇ ಎತ್ತರವಾದ ಚಿನ್ನದ ರಥಕ್ಕೆ ೧೨ಕೆ.ಜಿ.ಚಿನ್ನ ೨೦೦ಕೆ.ಜಿ.ಬೆಳ್ಳಿ ಬಳಕೆಯಾಗಲಿದ್ದು, ರಥ ನಿರ್ಮಾಣ ಮಾಡಲಿರುವ ಉಡುಪಿಯ ಸ್ವರ್ಣ ಜ್ಯುವೆಲ್ಲರ‍್ಸ್‌ನ ಗುಜ್ಜಾಡಿ ರಾಮದಾಸ ನಾಯಕ್‌ರಿಗೆ ಸಾಂಕೇತಿಕವಾಗಿ ಚಿನ್ನವನ್ನು ಹಸ್ತಾಂತರಿಸಲಾಯಿತು. ಸರಕಾರದ ಹೊಸ ನಿಯಮದಂತೆ ಚಿನ್ನದ ಗುಣಮಟ್ಟವನ್ನು ಎನ್‌ಐಟಿಕೆ ತಜ್ಞರು ಪರೀಕ್ಷಿಸಲಿದ್ದು, ಈ ಪರೀಕ್ಷೆಗೊಳಪಡುವ ಮೊದಲ ಸಂಸ್ಥೆ ಸ್ವರ್ಣ ಜ್ಯುವೆಲ್ಲರ‍್ಸ್ ಆಗಲಿದೆ. ಮುಂದಿನ ಎಪ್ರಿಲ್ ಜಾತ್ರೆಯ ಸಂದರ್ಭ ಚಿನ್ನದ ರಥ ಸಮರ್ಪಣೆ ನಡೆಯುವ ಸಾಧ್ಯತೆಯಿದೆ.
ಕಟೀಲು ಭ್ರಾಮರಿಯ ಮೂಲಸ್ಥಾನ ಕುದ್ರುವಿನಲ್ಲಿ ಅಭಿವೃದ್ಧಿ ಕಾರ‍್ಯಗಳು ಐದು ಕೋಟಿ ರೂ.ನಲ್ಲಿ ನಡೆಯಲಿದ್ದು, ತೀರ್ಥಬಾವಿ, ಕೆರೆ ಮುಂತಾದ ಕಾಮಗಾರಿಗಳನ್ನು ಸಚಿವ ವಿನಯ ಕುಮಾರ ಸೊರಕೆ ಉದ್ಘಾಟಿಸಿದರು.
ದೇಗುಲದ ಕಚೇರಿ ಕಾಗದ ರಹಿತವಾಗಿದ್ದು ನವೀಕೃತ ಕಚೇರಿ ಹಾಗೂ ಕಂಪ್ಯೂಟರ್ ವ್ಯವಸ್ಥೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಡಾ.ಸುರೇಶ್ ರಾವ್ ಕಟೀಲು ದೇವಸ್ಥಾನದಿಂದ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದ್ದು, ಅದಕ್ಕೆ ಪೂರಕವಾದ ಸಹಕಾರವನ್ನು ಆರೋಗ್ಯ ಇಲಾಖೆಯಿಂದ ಮಾಡಿಕೊಡುವ ಭರವಸೆಯನ್ನು ಖಾದರ್ ನೀಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಡಿ.ವಿ.ಸದಾನಂದ ಗೌಡ, ಸಚಿವ ಅಭಯಚಂದ್ರ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ಶಾಸಕ ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ಬೆಂಗಳೂರಿನ ದಯಾನಂದ ರೆಡ್ಡಿ, ಉದ್ಯಮಿ ಐಕಳ ಹರೀಶ್ ಶೆಟ್ಟಿ, ಸಂಜೀವನಿ ಟ್ರಸ್ಟ್‌ನ ಸಂಜೀವ ರಾವ್, ದಾನಿ ಸತೀಶ್ ಶೆಟ್ಟಿ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಮುಂತಾದವರಿದ್ದರು. ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ ಸ್ವಾಗತಿಸಿದರು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ ವಂದಿಸಿದರು. ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

* ರಾಜ್ಯದಲ್ಲೇ ಅತಿ ಎತ್ತರದ ಚಿನ್ನದ ರಥ
* ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಾಗದ ರಹಿತ ಕಚೇರಿ ಹೊಂದಿದ ಮೊದಲ ದೇಗುಲ ಕಟೀಲು
* ಕಟೀಲು ದೇಗುಲದಿಂದ ಆಸ್ಪತ್ರೆಯ ಕನಸು
* ಕಟೀಲಿನಲ್ಲಿ ಆಕರ್ಷಣೆಯ ಕೇಂದ್ರವಾಗಲಿರುವ ಕುದ್ರು


Friday, August 16, 2013

ಶಿಬರೂರು ಹಯಗ್ರೀವ ತಂತ್ರಿ ನಿಧನ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೆಶ್ವರೀ ದೇಗುಲದ ತಂತ್ರಿಗಳಾದ ಶಿಬರೂರು ಹಯಗ್ರೀವ ತಂತ್ರಿ(೮೫ವ.) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಕಟೀಲು ದೇಗುಲದಲ್ಲಿ ತಂತ್ರಿಗಳಾಗಿ ನಾಲ್ಕು ಬ್ರಹ್ಮಕಲಶಗಳನ್ನು ನೆರವೇರಿಸಿರುವ ಹಯಗ್ರೀವ ತಂತ್ರಿಯವರು ಶಿಮಂತೂರು, ಏಳಿಂಜೆ, ಕಲ್ಲಮುಂಡ್ಕೂರು, ಮಂಗಳೂರು ವೀರಭದ್ರ, ಹೊಯ್ಗೆಗುಡ್ಡೆ, ದೇಂದಡ್ಕ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ದೇಗುಲಗಳ, ಹತ್ತಾರು ದೈವಸ್ಥಾನಗಳ ತಂತ್ರಿಗಳಾಗಿ ಕಾರ‍್ಯನಿರ್ವಹಿಸುತ್ತಿದ್ದರು. ಪೇಜಾವರ ವಿಶ್ವೇಶತೀರ್ಥರಲ್ಲಿ ಸುಧಾ ಮಂಗಳ ಪಾಠ ಹೇಳಿಸಿಕೊಂಡ ಪ್ರಥಮ ಶಿಷ್ಯರಾಗಿದ್ದು,  ತಂತ್ರಿ ವರ್ಗದಲ್ಲಿ ಇವರಷ್ಟು ಚಂಡಿಕಾಹೋಮವನ್ನು ಮಾಡಿದವರು ಬೇರೆ ಯಾರೂ ಇದ್ದಂತಿಲ್ಲ. ಪುರೋಹಿತವರ್ಗದಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದ ಇವರು ಮನೆಯನ್ನೇ ಗುರುಕುಲವನ್ನಾಗಿಸಿ, ಹತ್ತಾರು ಶಿಷ್ಯರಿಗೆ ಪಾಠ ಹೇಳಿದವರು. ಹಯಗ್ರೀವ ತಂತ್ರಿಯವರು ಪಲಿಮಾರು ಮಠದ ಈಗಿನ ಯತಿಗಳ ಪೂರ್ವಾಶ್ರಮದ ತಂದೆಯಾಗಿದ್ದಾರೆ. ಪತ್ನಿ, ಪುತ್ರ ವೇದವ್ಯಾಸ ತಂತ್ರಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Sunday, August 11, 2013

ಕಟೀಲು ದೇವಸ್ಥಾನದಲ್ಲಿ ನಾಗರ ಪಂಚಮಿ ಸಂಭ್ರಮ


ಕಟೀಲು ದೇವಸ್ಥಾನದ ಒಳಾಂಗಣದಲ್ಲಿ ಹಾಗೂ ಹೊರಗಿನ ನಾಗದೇವರ ಸನ್ನಿಧಿ ಚಿತ್ರಕೂಟದಲ್ಲಿ ನಾಗರಾಧನೆ ನಡೆಯಿತು.

ಆ.೨೫: ಕಟೀಲು ದೇಗುಲದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ


ಕುದ್ರು ಅಭಿವೃದ್ಧಿ ಕಾಮಗಾರಿ ಆರಂಭ, ಕಾಗದ ರಹಿತ ಕಚೇರಿ ಉದ್ಘಾಟನೆ
ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಭಿವೃದ್ಧಿ ಪರ್ವ ಆರಂಭವಾದಂತಿದೆ. ತಾ.೨೫ರಂದು ರಾಜ್ಯದಲ್ಲೇ ಅತ್ಯಂತ ಎತ್ತರವಾದ ಸುಮಾರು ನಾಲ್ಕು ಕೋಟಿ ರೂ.ಗೂ ಮಿಕ್ಕಿದ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ ನಡೆಯಲಿದೆ. ಈಗಾಗಲೇ ಚಿನ್ನದ ರಥದ ಬೆಳ್ಳಿಯ ಕಾರ‍್ಯಗಳು ಪೂರ್ಣಗೊಂಡಿದ್ದು, ಚಿನ್ನದ ಕೆಲಸ ನಡೆಯಬೇಕಿದೆ. ಈ ಕಾರ‍್ಯಕ್ಕೆ ತಾ.೨೫ರ ಕಾರ‍್ಯಕ್ರಮದಲ್ಲಿ ಸಚಿವ ರಮಾನಾಥ ರೈ ಚಾಲನೆ ನೀಡಲಿದ್ದಾರೆ.
ಕಟೀಲು ಭ್ರಾಮರೀಯ ಮೂಲಸ್ಥಾನ ಕುದ್ರುವಿನಲ್ಲಿ ಸುಮಾರು ಎರಡು ಕೋಟಿ ರೂ.ಗಳಲ್ಲಿ ಕೆರೆಗಳ ನಿರ್ಮಾಣ, ಯಾಜ್ಞಿಕ ವೃಕ್ಷಗಳ ನೆಡುವಿಕೆ, ಮಾಡು ರಹಿತ ಗರ್ಭಗುಡಿಯ ನಿರ್ಮಾಣ ಹೀಗೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಆಗಿರುವ ಕಾಮಗಾರಿಗಳನ್ನು ಸಚಿವ ವಿನಯಕುಮಾರ ಸೊರಕೆ ಉದ್ಘಾಟಿಸಲಿದ್ದಾರೆ.
ದೇಗುಲದ ಸೇವಾ, ಆಡಳಿತ ಕಚೇರಿಯಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಕಾಗರ ರಹಿತ ಕಚೇರಿಯನ್ನಾಗಿಸುವ ಪ್ರಯತ್ನ ಮಾಡಲಾಗಿದೆ. ಈ ಯೋಜನೆಯನ್ನು ಉದ್ಘಾಟಿಸುವವರು ಸಚಿವ ಯು.ಟಿ.ಖಾದರ್. ಈ ಸಂದರ್ಭ ಉಪಸ್ಥಿತರಿರುವವರು ಸಚಿವ ಅಭಯಚಂದ್ರ ಜೈನ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಾಂಸದ ನಳಿನ್ ಕುಮಾರ್, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್‌ಬಾವಾ, ಗಣೇಶ ಕಾರ್ಣಿಕ್, ಮೋನಪ್ಪ ಭಂಡಾರಿ, ದಯಾನಂದ ರೆಡ್ಡಿ, ಧಾಂಇಕ ಆಯುಕ್ತ ನಂದಕುಮಾರ್, ಜಿಲ್ಲಾಧಿಕಾರಿ ಎನ್.ಪ್ರಕಾಶ್ ಸೇರಿದಂತೆ ವಿವಿಧ ದಾನಿಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಬನ್ನಂಜೆಗೆ ಪ್ರಜ್ಞಾದೀಪ್ತಿ ಪ್ರಶಸ್ತಿ, ವೇಙ್ಕಟೇಶ್ವರ ಉಪಾಧ್ಯಾಯ ಪ್ರತಿಷ್ಠಾನ



ಕಟೀಲು : ಅನೇಕ ಪುರೋಹಿತರು ಸಂಸ್ಕೃತ ಜ್ಞಾನವಿಲ್ಲದೆ, ಮಂತ್ರಗಳನ್ನು ಕಂಠಪಾಠ ಮಾಡಿ ಉಚ್ಛರಿಸುತ್ತಾರೆ. ಇದು ಸರಿಯಲ್ಲ. ಹಾಗಾಗಿ ಪುರೋಹಿತರನ್ನು ತಿದ್ದಬೇಕಾಗಿದೆ ಎಂದು ಹೇಳಿದವರು ಬನ್ನಂಜೆ ಗೋವಿಂದಾಚಾರ್ಯರು.
 ಆ.10;
ಕಟೀಲು ದೇಗುಲದ ಸರಸ್ವತೀ ಸದನದಲ್ಲಿ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯ ಪ್ರತಿಷ್ಠಾನ ಕೊಡಮಾಡಿದ ಪ್ರಥಮ ಪ್ರಜ್ಞಾದೀಪ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಇಂಗ್ಲಿಷ್ ಮಾಧ್ಯಮದ ಕಲಿಕೆಯಿಂದ ಮಕ್ಕಳು ಸರಿಯಾಗಿ ಕನ್ನಡವನ್ನೂ ಮಾತನಾಡುತ್ತಿಲ್ಲ, ಇಂಗ್ಲಿಷ್‌ನಲ್ಲೂ ಮಾತನಾಡುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪತ್ರಿಕೋದ್ಯಮ ಅಪಶಬ್ದಗಳನ್ನು ಸೃಷ್ಟಿಸುವ ಕಾರ್ಖಾನೆಯಾಗುತ್ತಿದೆ. ಭಾಷಾ ಶುದ್ಧತೆ, ವಿಚಾರಶುದ್ಧತೆಗಾಗಿ ನಿಷ್ಟುರವಾದಿಯಾಗಿದ್ದ ಜ್ಞಾನಿ ಉಪಾಧ್ಯಾಯರ ಹೆಸರಿನಲ್ಲಿ ನೀಡುತ್ತಿರುವ ಪ್ರಜ್ಞಾದೀಪ್ತಿ ಪ್ರಶಸ್ತಿಯನ್ನು ಪ್ರೀತಿಗಾಗಿ ಸ್ವೀಕರಿಸುತ್ತಿದ್ದೇನೆ ಎಂದ ಅವರು ತನ್ನ ಬಾಲ್ಯದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಗೆಳೆಯರು ಒತ್ತಾಯಿಸಿ ಎಳೆದೊಯ್ದು ಆಶುಭಾಷಣ ಸ್ಪರ್ಧೆಯೊಂದರ ವೇದಿಕೆ ಹತ್ತಿಸಿದರು. ಶಿವರಾಮ ಕಾರಂತರ ಕಾದಂಬರಿಗಳು ವಿಷಯ. ಮೂರು ನಿಮಿಷದ ಅವಧಿ. ಕಾರಂತರ ಅಷ್ಟೂ ಕಾದಂಬರಿಗಳನ್ನು ಓದಿಕೊಂಡಿದ್ದ ನನಗೆ ಮಾತು ಬಾರದು. ಸನ್ಮಾನ್ಯ ತೀರ್ಪುಗಾರರೆ, ಸಭಾಸದರೆ ನಮಸ್ಕಾರಗಳು. ಕಾರಂತರು ಪ್ರಸಿದ್ಧ ಕಾದಂಬರಿಕಾರರು ಎಂದಷ್ಟೇ ಹೇಳಿ ಭಾಷಣ ಮುಗಿಸಿದೆ. ಅನಂತರ ಅರಿವಾಯಿತು, ವಿಷಯ ತಿಳಿದಿದ್ದರೆ ಸಾಲದು. ಹೇಳಲು ಧೈರ‍್ಯ ಬೇಕು ಎಂಬುದು.
ಉಪಾಧ್ಯಾಯ ಪ್ರತಿಷ್ಠಾನವನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು.
ಈಶ್ವರಯ್ಯ ಬನ್ನಂಜೆಯವರನ್ನು ಅಭಿನಂದಿಸಿದರು. ಕೊರ್ಗಿ ಉಪಾಧ್ಯಾಯರ ಸಂಸ್ಮರಣೆಯನ್ನು ಮಾಡಿದ ಮೇಲುಕೋಟೆ ಉಮಾಕಾಂತ ಭಟ್, ಯಕ್ಷಗಾನ, ಪೌರೋಹಿತ್ಯ, ಸಾಹಿತ್ಯ ಕ್ಷೇತ್ರಕ್ಕೆ ಉಪಾಧ್ಯಾಯರ ಕೊಡುಗೆ ದೊಡ್ಡದು. ಅವರ ವಿದ್ವತನ್ನು ಗುರುತಿಸುವ ಕಾರ‍್ಯ ಆಗಿಲ್ಲ ಎಂದರು.
ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಡಾ.ಭಾಸ್ಕರಾನಂದ ಕುಮಾರ್, ದೇಗುಲದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ ಹೆಗ್ಡೆ, ಡಾ.ಶಶಿಕುಮಾರ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಅನಂತಪದ್ಮನಾಭ ಆಸ್ರಣ್ಣ ಮತ್ತಿತರರಿದ್ದರು. ಹಿರಣ್ಯ ವೇಂಕಟೇಶ್ವರ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಪಂಜ ಭಾಸ್ಕರ ಭಟ್ ಸ್ವಾಗತಿಸಿದರು. ಹರಿನಾರಾಯಣದಾಸ ಆಸ್ರಣ್ಣ ವಂದಿಸಿದರು. ತಾಳಮದ್ದಲೆ, ಭಾವನಾ ತಂಡದಿಂದ ಯೇಗ್ದಾಗೆಲ್ಲಾ ಐತೆ ನಾಟಕ ಪ್ರದರ್ಶನಗೊಂಡಿತು.
ಚಿತ್ರ ಈಮೆಲ್



Saturday, July 20, 2013

ಅವಿಭಜಿತ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ : ಫಲಿತಾಂಶ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಶನಿವಾರ ಆಯೋಜಿಸಲಾದ ಪ್ರೌಢಶಾಲಾ ವಿದ್ಯಾರ್ಥಿಗಳ ಅವಿಭಜಿತ ಮಟ್ಟದ ಗಾಯನ ಸ್ಪರ್ಧೆಯ ಫಲಿತಾಂಶ ಹೀಗಿದೆ.
ದೇಶಭಕ್ತಿಗೀತೆ :
ಹುಡುಗರ ವಿಭಾಗ : ಆದಿತ್ಯ ಎಸ್. ಭಟ್, ರೋಟರಿ ಕಿನ್ನಿಗೋಳಿ(ಪ್ರಥಮ), ಸರ್ವಜಿತ್ ಉಪಾಧ್ಯಾಯ, ಲಕ್ಷ್ಮೀಜನಾರ್ದನ ಬೆಳ್ಮಣ್(ದ್ವಿತೀಯ), ಸುಜ್ಞಾನ ಹೇರಳೆ, ವಿವೇಕಾನಂದ ಪುತ್ತೂರು(ತೃತೀಯ)
ಹುಡುಗಿಯರ ವಿಭಾಗ : ಸಮನ್ವಿ ರೈ, ವಿವೇಕಾನಂದ ಪುತ್ತೂರು(ಪ್ರಥಮ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ದ್ವಿತೀಯ), ನೈಮಿಶಾ ಶೆಟ್ಟಿ, ಸೈಂಟ್ ಫ್ರಾನ್ಸಿಸ್ ಮುದರಂಗಡಿ
ಭಾವಗೀತೆ
ಹುಡುಗರ ವಿಭಾಗ : ರಾಧೇಶ್, ರೋಟರಿ ಮೂಡುಬಿದ್ರೆ(ಪ್ರಥಮ), ಮಯೂರ್, ಆಳ್ವಾಸ್ ಮೂಡುಬಿದ್ರೆ(ದ್ವಿತೀಯ), ಶಶಾಂಕ್ ಡಿ., ವಿವೇಕಾನಂದ ಪುತ್ತೂರು(ತೃತೀಯ)
ಹುಡುಗಿಯರ ವಿಭಾಗ : ಪ್ರಶ್ವಿ, ಜೆಸಿಸಿ ಕಾರ್ಕಳ(ಪ್ರಥಮ), ಪೂಜಾ ಎಸ್, ಶಂಕರ ಅಡ್ಯಂತಾಯ ಶಾಲೆ ನಿಟ್ಟೆ(ದ್ವಿತೀಯ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ತೃತೀಯ)
ಭಕ್ತಿಗೀತೆ
ಹುಡುಗರ ವಿಭಾಗ : ಆದಿತ್ಯ ಎಸ್.ಭಟ್,ರೋಟರಿ ಕಿನ್ನಿಗೋಳಿ(ಪ್ರಥಮ), ಸಂಪತ್, ವಿದ್ಯಾದಾಯಿನಿ ಸುರತ್ಕಲ್(ದ್ವಿತೀಯ), ಶ್ರೀಶದಾಸ್, ವಿದ್ಯಾವರ್ಧಕ ಮುಂಡ್ಕೂರು(ತೃತೀಯ)
ಹುಡುಗಿಯರ ವಿಭಾಗ : ಆತ್ರೇಯ ಕೃಷ್ಣಾ ಕೆ, ಭುವನೇಂದ್ರ ಕಾರ್ಕಳ(ಪ್ರಥಮ), ನಿರೀಕ್ಷಾ ಯು.ಕೆ, ಬೆಸೆಂಟ್ ಮಂಗಳೂರು(ದ್ವಿತೀಯ), ಶ್ರೇಯ ಶೀಲಾ, ರೋಟರಿ ಮೂಡುಬಿದ್ರೆ(ತೃತೀಯ)
ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿಯನ್ನು ಕಟೀಲು ಝೇಂಕಾರ ಬಳಗದ ಅನಂತಪದ್ಮನಾಭ ಆಸ್ರಣ್ಣ ವಿತರಿಸಿದರು. ಬಜಪೆ ವ್ಯವಸಾಯ ಬ್ಯಾಂಕಿನ ರತ್ನಾಕರ ಶೆಟ್ಟಿ, ಉಪಪ್ರಾಚಾರ್ಯ ಸುರೇಶ್ ಭಟ್ ಮತ್ತಿತರರಿದ್ದರು. ದೇವಿಪ್ರಸಾದ್ ನಿರೂಪಿಸಿದರು.
ಉದ್ಘಾಟನೆ :
ಗಾಯನ ಸ್ಪರ್ಧೆಯನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಹಳೆ ವಿದ್ಯಾರ್ಥಿ ಸಂಘದ ಶ್ರೀಹರಿ ಆಸ್ರಣ್ಣ, ಉದ್ಯಮಿ ಚಿತ್ತರಂಜನ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸುಬ್ರಹ್ಮಣ್ಯಪ್ರಸಾದ ಶಿಬರೂರು ಮತ್ತಿತರರಿದ್ದರು. ಕೆ.ವಿ.ಶೆಟ್ಟಿ ನಿರೂಪಿಸಿದರು.

ಕಟೀಲು : ಹಂಸಧ್ವನಿ ಉದ್ಘಾಟನೆ



ಕಟೀಲು : ದುರ್ಗಾಪರಮೇಶ್ವರೀ ದೇಗುಲದಿಂದ ನಡೆಸಲ್ಪಡುವ ಪ್ರಾಥಮಿಕ, ಪ್ರೌಢ, ಪದವೀಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಉತ್ತೇಜನಕ್ಕೆ ತಲಾ ೫೦ಸಾವಿರದಂತೆ ೨ಲಕ್ಷ ರೂ.ಗಳನ್ನು ಕಟೀಲು ದೇಗುಲದ ವತಿಯಿಂದ ನೀಡಲು ಉದ್ದೇಶಿಸಲಾಗಿದೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದರು.
ಅವರು ಕಟೀಲು ದೇಗುಲ ಹಾಗೂ ಮುಂಬೈ ಸಂಜೀವಿನಿ ಟ್ರಸ್ಟ್ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಗೀತ, ಯೋಗ, ಚಿತ್ರ, ನಾಟ್ಯ, ಇಂಗ್ಲಿಷ್, ಸಂಸ್ಕೃತ ಸಂಭಾಷಣೆ ತರಗತಿ ಹಾಗೂ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಸಂಭಾಷಣೆ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಅನಂತಪದ್ಮನಾಭ ಆಸ್ರಣ್ಣ, ಸಂಜೀವಿನಿ ಟ್ರಸ್ಟ್‌ನ ಡಾ.ಸುರೇಶ್ ರಾವ್, ಜಿ.ಪಂ.ಸದಸ್ಯ ಈಶ್ವರ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು. ಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು. ಉಪಪ್ರಾಚಾರ್ಯ ಸುರೇಶ್ ಭಟ್ ಸ್ವಾಗತಿಸಿದರು. ವಾಸುದೇವ ಶೆಣೈ ವಂದಿಸಿದರು.

Sunday, July 7, 2013

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಂಭ್ರಮದ ಸಲುವಾಗಿ ಜುಲೈ ೨೦ರ ಶನಿವಾರ ಕಟೀಲು ಸರಸ್ವತೀ ಸದನದಲ್ಲಿ ಅವಿಭಜಿತ ದ.ಕ. ಜಿಲ್ಲಾ ಮಟ್ಟದ(ಮಂಗಳೂರು ಮತ್ತು ಉಡುಪಿ) ಪ್ರೌಢಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 
ಸ್ಪರ್ಧೆಯು ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ನಡೆಯಲಿದ್ದು, ಭಕ್ತಿಗೀತೆ, ದೇಶಭಕ್ತಿ ಗೀತೆ ಹಾಗೂ ಭಾವಗೀತೆ ವಿಭಾಗಗಳಲ್ಲಿ ಗಾಯನ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನವಿದೆ. ಒಂದು ಸಂಸ್ಥೆಯಿಂದ ಪ್ರತಿ ವಿಭಾಗಕ್ಕೆ ಒಬ್ಬ ಸ್ಪರ್ಧಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸಲಿಚ್ಚಿಸುವ ಸ್ಪರ್ಧಿಗಳು, ತಾವು ಪ್ರತಿನಿಧಿಸುವ ಶಾಲೆಯ ಮುಖ್ಯೋಪಾಧ್ಯಾಯರ ಸಹಿಯುಳ್ಳ ಪತ್ರದೊಂದಿಗೆ, ದೂರವಾಣಿ ಸಂಖ್ಯೆಯ ಸಹಿತ ಜುಲೈ ೧೫ರ ಒಳಗಾಗಿ ಶ್ರೀ ಸುರೇಶ್ ಭಟ್(೯೪೪೯೪೩೭೭೯೩) ಉಪಪ್ರಾಚಾರ‍್ಯರು, ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ, ಕಟೀಲು, ಮಂಗಳೂರು ತಾಲೂಕು, ದ.ಕ.-೫೭೪೧೪೮. ಇಲ್ಲಿಗೆ ತಿಳಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಆಹ್ವಾನ


ಕಟೀಲು : ಇಲ್ಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಐದನೇ ವಾರ್ಷಿಕೋತ್ಸವದ ಸಲುವಾಗಿ ಅಕ್ಟೋಬರ್ ೨೦ರಂದು ವಿವಿಧ ಮಕ್ಕಳ ಮೇಳಗಳ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಆಸಕ್ತ ಮಕ್ಕಳ ತಂಡಗಳು ಆಗಸ್ಟ್ ೩೧ರ ಒಳಗೆ ತಮ್ಮ ಹೆಸರನ್ನು ವಾಸುದೇವ ಶೆಣೈ(೮೭೨೨೬೧೪೧೦೧) ಇವರಲ್ಲಿ ನೋಂದಾಯಿಸಬಹುದೆಂದು ಸಂಸ್ಥೆಯ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.

Wednesday, July 3, 2013

ಕಟೀಲು ಪ್ರೌಢಶಾಲೆಯಲ್ಲಿ ಸಸಿ ವಿತರಣೆ


ಕಟೀಲು : ಶ್ರೀ ದುರ್ಗಾಪರಮೆಶ್ವರೀ ದೇವಳ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ನಡೆಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಮರವೂರು, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಗೋಪಾಲಕೃಷ್ಣ ತಂತ್ರಿ, ಉಪಪ್ರಾಚಾರ್ಯ ಸುರೇಶ್
ಭಟ್ ಮತ್ತಿತರಿದ್ದರು.

Monday, June 24, 2013

......ಕೇರೆ ಹಾವಿನ ಬಾಲವನ್ನು ಜಡೆಗೆ ತಾಗಿಸಿದರೆ ಉದ್ಧವಾಗುತ್ತಾ?!


 
 
ಕಟೀಲು : ಹಾವಿಗೆ ಕಿವಿ ಕೇಳಿಸುತ್ತಾ?, ಹಾವು ದ್ವೇಷ ಸಾಧಿಸುತ್ತಾ?, ವಿಸಿಲ್ ಊದಿದರೆ ಹಾವು ಬರುತ್ತದಾ! ಕೇರೆ ಹಾವಿನ ಬಾಲವನ್ನು ಹುಡುಗಿಯರು ತಮ್ಮ ಜಡೆಗೆ ತಾಗಿಸಿದರೆ ಕೂದಲು ಉದ್ಧವಾಗುತ್ತಂತೆ ಹೌದಾ? ಕೇರೆ ಹಾವು ಬಾಲದಲ್ಲಿ ಬಡಿಯುತ್ತದೆಯಂತೆ ನಿಜವಾ? ಹಸಿರು ಹಾವು ತಲೆಗೆ ಕುಟುಕಿದರೆ ಸಾಯುತ್ತೇವಾ? ಹೆಬ್ಬಾವು ಮಕ್ಕಳನ್ನು ನುಂಗುತ್ತಾ...ಹೀಗೆ ಹಾವುಗಳ ಕುರಿತಾದ ಹತ್ತಾರು ಪ್ರಶ್ನೆಗಳನ್ನೆದುರಿಸಿದವರು ಖ್ಯಾತ ಹಾವು ರಕ್ಷಕ ಉಡುಪಿಯ ಗುರುರಾಜ ಸನಿಲ್.
ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಸುವರ್ಣ ಮಹೋತ್ಸವದ ವರ್ಷಾಚರಣೆ ಸಲುವಾಗಿ ಆಯೋಜಿಸಲಾದ ಹಾವು-ನಾವು ಪರಿಸರ ಜಾಗೃತಿ, ಪ್ರಾತ್ಯಕ್ಷಿಕೆ ಕಾರ‍್ಯಕ್ರಮ.
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವೀಡಿಯೋ ಮೂಲಕ ಐವತ್ತಕ್ಕೂ ಹೆಚ್ಚು ಹಾವುಗಳ ಬಗ್ಗೆ ಮಾಹಿತಿ ನೀಡಿದ ಗುರುರಾಜ ಸನಿಲ್ ಹಾವಿಗೆ ಕಿವಿಯಿಲ್ಲ, ಭಾರತದಲ್ಲಿ ಹೆಬ್ಬಾವು ಮಕ್ಕಳನ್ನು ತಿಂದಿರುವುದಕ್ಕೆ ದಾಖಲೆಯಿಲ್ಲ. ಕೇರೆ ಹಾವು ಹೊಡೆದದ್ದನ್ನು ನೋಡಿದವರಿಲ್ಲ ಹೀಗೆ ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತ, ಕೇರೆ, ಹೆಬ್ಬಾವು, ಇರ್ತಲೆ ಹಾವುಗಳನ್ನು ಮಕ್ಕಳ ಕೈಗೇ ಕೊಟ್ಟು ಅವುಗಳಿಗೆ ಉಪಟಳ ಮಾಡದಿದ್ರೆ ಅವೇನೂ ಮಾಡುವುದಿಲ್ಲ. ನಾಯಿ, ಬೆಕ್ಕುಗಳನ್ನು ಪ್ರೀತಿಸಿದಂತೆ ಹಾವುಗಳನ್ನೂ ನಾವು ಪ್ರೀತಿಸಬಹುದು. ವಿಷಪೂರಿತ ಹಾವುಗಳೆಂದು ತಪ್ಪು ನಂಬಿಕೆಯಿಂದ ವಿಷ ರಹಿತ ಹಾವುಗಳನ್ನೂ ಕೊಲ್ಲುತ್ತಿದ್ದೇವೆ. ಅವುಗಳ ಬಗ್ಗೆ ಅರಿವು ಅಗತ್ಯ ಎಂದು ಹೇಳಿದ ಸನಿಲ್ ಹಾವು ಕಡಿತವಾದರೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿರು. ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣದಾಸ ಆಸ್ರಣ್ಣ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

Tuesday, June 11, 2013

ಕಟೀಲಿನಲ್ಲಿ ಯಕ್ಷಗಾನ ಹಿಮ್ಮೇಳ ಅಧ್ಯಯನ ಕಮ್ಮಟ

ಕಟೀಲು : ಆಧುನಿಕತೆ ಜೊತೆಗೆ ಪರಂಪರೆಯ ಉಳಿಸುವಿಕೆ ಎಲ್ಲ ಕಲಾಪ್ರಾಕಾರಗಳಂತೆ ಯಕ್ಷಗಾನಕ್ಕೂ ಅತ್ಯಗತ್ಯವಿದೆ ಎಂದು ಸಚಿವ ಅಭಯಚಂದ್ರ ಹೇಳಿದರು.
ಅವರು ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ಎರಡು ದಿನಗಳ ಅಧ್ಯಯನ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ದುರ್ಗಾಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ, ಬೊಂಡಾಲ ಚಾರಿಟೇಬಲ್ ಟ್ರಸ್ಟ್‌ನ ಸಚ್ಚಿದಾನಂದ ಶೆಟ್ಟಿ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಕಟೀಲು ಮೇಳಗಳ ದೇವೀಪ್ರಸಾದ ಶೆಟ್ಟಿ ಮುಂತಾದವರಿದ್ದರು. ಸದಸ್ಯ ಸಂಚಾಲಕ ಪದ್ಮನಾಭ ಗೌಡ ಸ್ವಾಗತಿಸಿದರು. ಅಶೋಕ್ ಭಟ್ ಉಜಿರೆ ಕಾರ‍್ಯಕ್ರಮ ನಿರೂಪಿಸಿದರು.
 ನೂರಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು, ವಿದ್ಯಾರ್ಥಿಗಳು ಭಾಗವಹಿಸಿದ ಈ ಕಮ್ಮಟಕ್ಕೆ ಕಟೀಲು ದೇವಸ್ಥಾನ, ದುರ್ಗಾ ಮಕ್ಕಳ ಮೇಳ, ಹಾಗೂ ಕಟೀಲು ಯಕ್ಷಗಾನ ಮೇಳಗಳು ಸಹಕಾರ ನೀಡಿವೆ.

ಸಮಾರೋಪ
ಮದ್ದಲೆಯಲ್ಲಿ ಇಪ್ಪತ್ತೈದು ಸ್ವರಗಳಿವೆ ಅಂತ ರಾಘವ ನಂಬಿಯಾರ್ ಹೇಳಿದಾಗ ಖ್ಯಾತ ಮದ್ದಲೆ ವಾದಕ ೨೮ಸ್ವರಗಳನ್ನು ಬಾರಿಸಿ ತೋರಿಸಿದರು. 
ಬಲಿಪ ನಾರಾಯಣ ಭಾಗವತರು ಸುಧನ್ವಾರ್ಜುನದ ಒಂದೇ ಪದ್ಯವನ್ನು ಎಲ್ಲ ತಾಳಗಳಲ್ಲೂ ಹಾಡಿ ತೋರಿಸಿದರು.
ಆದಿತಾಳಕ್ಕೆ ಬಿಡ್ತಿಗೆಯಿಲ್ಲ ಎಂಬುದು ಬಹು ಚರ್ಚೆಯಾಗಿ ನಿರ್ಣಯವಾಗದೆ ಕೊನೆಗೆ ತಾಳಗಳಿಗೇ ಬೇರೆ ಗೋಷ್ಟಿ ಮಾಡುವುದು ಎಂದಾಯಿತು. 
ಗೋವಿಂದ ಭಟ್ ಮತ್ತು ಕೋಳ್ಯೂರು ರಾಮಚಂದ್ರ ರಾವ್ ಬಹು ಹುರುಪಿನಿಂದ ಅತಿಕಾಯ ಲಕ್ಷ್ಮಣನ ಯುದ್ಧ, ಧಕ್ಷಾಧ್ವರ ಕೆಲ ಭಾಗಗಳನ್ನು ಪ್ರಾತ್ಯಕ್ಷಿಕೆಗೆ ಕುಣಿದು ತೋರಿಸಿದರು.
ಪಂಚವಟಿಯ ರಾಘವ ನರಪತೆಯನ್ನು ಬಲಿಪ, ತೆಂಕಬೈಲು, ಪುಂಡಿಕಾಯಿ, ಬಲಿಪ ಶಿವಶಂಕರ, ಲೀಲಾವತಿ ಬೈಪಾಡಿತ್ತಾಯ, ಕುಬಣೂರು ಹೀಗೆ ಆರು ಬೇರೆ ಬೇರೆ ಶೈಲಿಗಳಲ್ಲಿ ಹಾಡಿ ತೋರಿಸಿದ್ದಕ್ಕೆ ಎಂಭತ್ತರ ಗೋವಿಂದ ಭಟ್, ಕೋಳ್ಯೂರು, ದಿವಾಣ ಶಿವಶಂಕರ ಭಟ್ ಅಭಿನಯಿಸಿದರು.
ಇದೆಲ್ಲ ನಡೆದದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ನಡೆದ ಕಮ್ಮಟದ ಎರಡನೆಯ ದಿನವಾದ ಸೋಮವಾರ.
ಕಟೀಲು ಮೇಳಗಳ ಕಲಾವಿದರೂ ಸೇರಿದಂತೆ ಹಿಮ್ಮೇಳ ಕಲಾವಿದರ ಭಾಗವಹಿಸುವಿಕೆ ಕಡಿಮೆ ಪ್ರಮಾಣದಲ್ಲಿದ್ದರೂ, ಭಾಗವಹಿಸಿದ ಹಿರಿಯ ವಿದ್ವಾಂಸರ, ಕಲಾವಿದರ ಅಭಿಪ್ರಾಯದಂತೆ ಎರಡು ದಿನಗಳಲ್ಲಿ ಇದಕ್ಕಿಂತ ಚಂದವಾಗಿ ಗೋಷ್ಟಿಯನ್ನು ಮಾಡಲಾಗದು ಎಂಬಷ್ಟು ಪರಿಣಾಮಕಾರಿಯಾಗಿ ಗೋಷ್ಟಿ ಮೂಡಿ ಬಂದಿದೆ.
ಅಧ್ಯಯನ, ತರಬೇತಿಗಳ ಮೂಲಕ ಯಕ್ಷಗಾನ ಕಲಾವಿದರನ್ನು ಬೆಳೆಸಿ, ಯಕ್ಷಗಾನ ಕಲೆಯನ್ನು ಎತ್ತರಕ್ಕೇರಿಸುವ ಕೆಲಸ ಆಗಬೇಕೆಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಆಯೋಜಿಸಿದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ(ಪರಂಪರೆ-ಪ್ರಯೋಗ) ಕುರಿತು ನಡೆದ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು..
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ರಾಮಾಯಣ, ಮಹಾಭಾರತಗಳನ್ನು ಜನರಿಗೆ ಸುಲಭವಾಗಿ ತಿಳುಸವ ಮಾಧ್ಯಮವಾದ ಯಕ್ಷಗಾನ ಮತ್ತದರ ಕಲಾವಿದರು ಅಭಿನಂದನೀಯರು ಎಂದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ, ಯಕ್ಷಧರ್ಮ ಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ ಮತ್ತಿತರರಿದ್ದರು. ರಾಘವೇಂದ್ರ ನಂಬಿಯಾರ್ ಕಮ್ಮಟದ ಬಗ್ಗೆ ಮಾತನಾಡಿದರು. ಯು.ದುಗ್ಗಪ್ಪ ಸ್ವಾಗತಿಸಿದರು. ಪದ್ಮನಾಭ ಗೌಡ ಬಿಲಿನೆಲೆ ಕಾರ‍್ಯಕ್ರಮ ನಿರೂಪಿಸಿದರು.

ಪುಸ್ತಕ ವಿತರಣೆ



ಕಟೀಲು ಪ್ರಾಥಮಿಕ ಶಾಲಾ ಮಕ್ಕಳಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸದಸ್ಯರಾದ ರೋಸಿ ಪಿಂಟೋ, ರಾಮಗೋಪಾಲ್, ಹರಿಶ್ಚಂದ್ರ ರಾವ್ ಮುಖ್ಯ ಶಿಕ್ಷಕಿ ಮಾಲತಿ, ಮತ್ತಿತರರಿದ್ದರು.

ಪುಸ್ತಕ ವಿತರಣೆ
ಕಟೀಲು ಪ್ರಾಥಮಿಕ ಶಾಲಾ ಮಕ್ಕಳಿಗೆ ರಾಘವ ಚೌಟ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು. ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು.

ನಂದಿನಿ ಯುವಕ ಮಂಡಲದಿಂದ ಪುಸ್ತಕ ವಿತರಣೆ ನಡೆಯಿತು. ಜಿ.ಪಂ.ಸದಸ್ಯ ಈಶ್ವರ ಕಟೀಲ್, ಗ್ರಾ.ಪಂ.ಸದಸ್ಯ ಅರುಣ್ ಶೆಟ್ಟಿ, ದೇವೀಪ್ರಸಾದ ಶೆಟ್ಟಿ ಮತ್ತಿತರರಿದ್ದರು.

Saturday, June 8, 2013

ಕಟೀಲು ಪ್ರೌಢಶಾಲೆ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ





ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ ಶನಿವಾರ ಸರಸ್ವತೀ ಸದನದಲ್ಲಿ ನಡೆಯಿತು.
ಮಧುರೈ ಹೈಟೆಕ್ ಅರೈ ಲಿ.ನ ಆಡಳಿತ ನಿರ್ದೇಶಕ ಬಿ.ಟಿ.ಬಂಗೇರ ಉದ್ಘಾಟಿಸಿ, ಭ್ರಷ್ಟಾಚಾರ ಇಲ್ಲವಾಗಿಸಲು ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದರು.
ಸಂಗೀತ, ನೃತ್ಯ, ಯೋಗ ತರಗತಿಗಳನ್ನು ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಧುಕರ ಅಮೀನ್, ಸುವರ್ಣ ಮಹೋತ್ಸವದ ಸಲುವಾಗಿ ವರ್ಷವಿಡೀ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿ.ಪಂ.ಸದಸ್ಯ ಈಶ್ವರ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ‍್ಯ ಸುರೇಶ್ ಭಟ್ ಸ್ವಾಗತಿಸಿದರು. ಕೆ.ವಿ.ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಸಾಯಿನಾಥ ಶೆಟ್ಟಿ ವಂದಿಸಿದರು. ಬಳಿಕ ಅರುಣಾ ಉಡುಪ ಬಳಗದಿಂದ ವೈವಿಧ್ಯಮಯ ಕಾರ‍್ಯಕ್ರಮಗಳು ನಡೆದವು.

Sunday, May 26, 2013

ಯಕ್ಷಗಾನ ಕಲಾವಿದರಿಗೆ ಆರೋಗ್ಯ ತಪಾಸಣೆ


ಕಟೀಲು : ಇಲ್ಲಿನ ಯಕ್ಷಗಾನ ಮೇಳಗಳು ಹಾಗೂ ಕಟೀಲು ದೇಗುಲದ ಸಿಬಂದಿಗಳಿಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಶಿಬಿರ ಉದ್ಘಾಟಿಸಿದರು. ಶ್ರೀನಿವಾಸ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ವಾಸುದೇವ ಮಾತನಾಡಿ ತಮ್ಮ ಆಸ್ಪತ್ರೆಯಲ್ಲಿ ಇರುವ ಅನೇಕ ಸೌಲಭ್ಯಗಳನ್ನು ಅರ್ಹರು ಬಳಸಿಕೊಳ್ಳಬೇಕು. ಸಾಮಾಜಿಕವಾಗಿಯೂ ತಮ್ಮ ಆಸ್ಪತ್ರೆ ಜನರ ಬಳಿಗೆ ಹೋಗುತ್ತಿದೆ ಎಂದು ತಿಳಿಸಿದರು. ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪ್ರೌಢಶಾಲೆಯ ಉಪಪ್ರಾಚಾರ್ಯ ಸುರೇಶ್ ಭಟ್, ಶ್ರೀನಿವಾಸ ಸಂಸ್ಥೆಯ ಜನಾರ್ದನ ಮತ್ತಿತರರಿದ್ದರು.