Friday, February 24, 2012

ಶತಚಂಡಿಕಾ ಯಾಗ

ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೨೬ರ ಭಾನುವಾರ
ಡೆಕನ್ ಕ್ರಾನಿಕಲ್ ಮಾಲಕರಾದ ಶಾಂತಿಪ್ರಿಯದರ್ಶಿನಿ ಹಾಗೂ ವಿನಾಯಕರವಿ ರೆಡ್ಡಿ
ದಂಪತಿಗಳ ಸೇವಾ ರೂಪದ ಶತಚಂಡಿಕಾ ಯಾಗ ನಡೆಯಲಿದೆ.
ಕಟೀಲು ದೇವರ ಮೂಲಸ್ಥಾನವಾದ ಕುದುರು ಭ್ರಾಮರೀ ವನದಲ್ಲಿ ಶತಚಂಡಿಕಾಯಾಗ ನಡೆಯಲಿದೆ
ಎಂದು ಪ್ರಕಟನೆ ತಿಳಿಸಿದೆ.

Tuesday, February 21, 2012

ಕಟೀಲಿನಲ್ಲಿ ಸಂಭ್ರಮಿಸಿದ ಚಿತ್ರಕಲಾರಾಧನೆ ವರ್ಣನಂದಿನೀ








ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಿನಿ ನದಿಯ ಬಂಡೆಗಳಲ್ಲಿ, ರಥಬೀದಿಯಲ್ಲಿ, ಗೋಪುರದ ಮುಂದೆ ಹೀಗೆ ಅಲ್ಲಲ್ಲಿ ಕೂತ ಕರಾವಳಿಯ ಪ್ರಸಿದ್ದ ಇಪ್ಪತ್ತೈದು ಕಲಾವಿದರು ಚಿತ್ರ ಬಿಡಿಸುತ್ತಿದ್ದರು. ಕಟೀಲು ದೇವಸ್ಥಾನ, ಭ್ರಾಮರೀ, ರಕ್ತೇಶ್ವರೀ ಕಲ್ಲು, ನಂದಿನಿ ನದಿ, ಭ್ರಮರ ಹೀಗೆ ಅನೇಕ ಚಿತ್ರಗಳು ಖ್ಯಾತ ಕಲಾವಿದರಾದ ರಾಜೇಂದ್ರ ಕೇದಿಗೆ, ಸಯ್ಯದ್ ಆಸಿಫ್ ಅಲಿ, ದಿನೇಶ್ ಹೊಳ್ಳ, ತಾರಾನಾಥ ಕೈರಂಗಳ, ಸಪ್ನಾ ನೊರೊನ್ಹ, ಪೆರ್ಮುದೆ ಮೋಹನ್ ಕುಮಾರ್, ಆಶಾ ಶೆಟ್ಟಿ, ಹರೀಶ್ ಕೊಡಿಯಾಲ್‌ಬೈಲ್, ಜೀವನ್ ಕುಮಾರ್, ತ್ಯಾಗರಾಜ್, ಶಬ್ಬೀರ್ ಅಲಿ, ಪ್ರಮೋದ್ ರಾಜ್, ಸತೀಶ್ ರಾವ್, ಲಕ್ಷ್ಮೀನಾರಾಯಣ, ಸುಧೀರ್ ಕಾವೂರ್, ರಾಮಚಂದ್ರ ಕಾಮತ್, ರೇಶ್ಮಾ ಶೆಟ್ಟಿ, ಸುಧಾ ನಾಯಕ್, ರಚನಾ ಸೂರಜ್, ರೇಣುಕಾ, ನಾರಾಯಣ, ನವೀನ್ ಚಂದ್ರ, ನಿಶಾ, ಜಯಶ್ರೀ, ಲಕ್ಷ್ಮೀ ಬಿಜಿಲಿಯವರಿಂದ ಮೂಡಿ ಬಂದವು.
ಭಾನುವಾರ ಕಟೀಲು ದೇವರ ಸನ್ನಿಧಿಯಲ್ಲಿ ನಂದಿನಿ ನದಿಯಲ್ಲಿ ಶ್ರೀ ಭ್ರಾಮರೀಗೆ ನಡೆದ ಚಿತ್ರಕಲಾರಾಧನೆ ವರ್ಣ ನಂದಿನಿಯನ್ನು ಆಯೋಜಿಸಿದ್ದು ಝೇಂಕಾರ ಬಳಗ. ಸಹಕಾರ ನೀಡಿದ್ದು ಕರ್ಣಾಟಕ ಬ್ಯಾಂಕ್.
ನದಿಯ ಸ್ವಚ್ಛತೆ, ರಕ್ಷಣೆಯ ಜಾಗೃತಿ, ಕಲಾವಿದರಿಗೆ ಪ್ರೋತ್ಸಾಹ ಇದರ ಜೊತೆಗೆ ಚಿತ್ರಕಲೆಯ ಮೂಲಕ ಭ್ರಾಮರಿಯನ್ನು ಆರಾಧಿಸುವ ವಿಶಿಷ್ಟ ಕಲ್ಪನೆಯ ಕಾರ‍್ಯಕ್ರಮ ಇನ್ನಷ್ಟು ನಡೆಯಲಿ ಎಂದು ಶುಭ ಹಾರೈಸಿ, ಕಾರ‍್ಯಕ್ರಮವನ್ನು ಚಿತ್ರ ಬಿಡಿಸಿ ಉದ್ಘಾಟಿಸಿದವರು ಕರ್ಣಾಟಕ ಬ್ಯಾಂಕಿನ ಡಿಜಿಎಂ ಕೆ.ಜಿ.ರಮೇಶ್.
ಶುಭ ಹಾರೈಸಿದ್ದು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ ಮತ್ತು ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣ.
ಸಮಾರೋಪ ಕಾರ‍್ಯಕ್ರಮದಲ್ಲಿ ಕಲಾವಿದರು ತಾವು ರಚಿಸಿದ ಕಟೀಲು ದೇಗುಲದ ಅರ್ಚಕರೂ, ಝೇಂಕಾರ ಬಳಗದ ಅಧ್ಯಕ್ಷರೂ ಆದ ಅನಂತಪದ್ಮನಾಭ ಆಸ್ರಣ್ಣರ ಮೂಲಕ ದೇಗುಲಕ್ಕೆ ಅರ್ಪಿಸಿದರು. ಚಿತ್ರಕಲೆಯ ಮೂಲಕ ದೇವಿಯ ಸೇವೆಗೈದ ಎಲ್ಲರನ್ನೂ ಅಭಿನಂದಿಸಿದ ಅನಂತ ಆಸ್ರಣ್ಣ, ಈ ಚಿತ್ರಗಳನ್ನು ದೇಗುಲದಲ್ಲಿ ಇರಿಸಲಾಗುವುದು ಎಂದರು. ಲಕ್ಷ್ಮೀನಾರಾಯಣ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಲಿಂಗಪ್ಪ ಕಟೀಲು, ನವೀನ್ ಕುಮಾರ್ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೊ

Tuesday, February 7, 2012

ಕ್ರಿಕೆಟ್


ಕೊಂಡೇಲ ತರುಣ ವೃಂದದ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ಮರು ಫ್ರೆಂಡ್ಸ್ ಜೋಕಟ್ಟೆ ತಂಡ ಪ್ರಶಸ್ತಿ ಪಡೆಯಿತು. ಜಿ.ಪಂ.ಸದಸ್ಯ ಈಶ್ವರ್, ಗುರುರಾಜ್, ಶಂಕರ ಪೂಜಾರಿ, ತಾರಾನಾಥ ಶೆಟ್ಟಿ ಮತ್ತಿತರರಿದ್ದರು.