Tuesday, September 28, 2010

ಕಟೀಲ್ ಟ್ರೋಫಿ

ಕಟೀಲು : ಇಲ್ಲಿನ ನ್ಯೂಫ್ರೆಂಡ್ಸ್ ಆಯೋಜಿಸಿದ ಕಟೀಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಕಟೀಲ್ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್ ಪ್ರಥಮ, ಬಜ್ಪೆ ತಾರಿಕಂಬ್ಳ ತಂಡ ದ್ವಿತೀಯ ಪ್ರಶಸ್ತಿಯನ್ನು ಗೆದ್ದುಕೊಂಡವು. ಉತ್ತಮ ಎಸೆತಗಾರನಾಗಿ ರುಕ್ಕಯ್ಯ ಬಜ್ಪೆ, ಪಂದ್ಯಶ್ರೇಷ್ಟನಾಗಿ ಮಧು, ಉತ್ತಮ ದಾಂಡಿಗನಾಗಿ ಕಿಶೋರ್ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರು. ೧೬ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಬಹುಮಾನಗಳನ್ನು ರಾಜೇಶ್, ಕಿರಣ್, ಕಿಶೋರ್ ವಿತರಿಸಿದರು.

Saturday, September 25, 2010

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ


ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಾರಂಭದಲ್ಲಿ ಯಕ್ಷಗಾನ ಚೆಂಡೆವಾದಕ ಪೆರುವಾಯಿ ನಾರಾಯಣ ಭಟ್ಟರಿಗೆ ಆಸ್ರಣ್ಣ ಪ್ರಶಸ್ತಿ, ಉಜಿರೆ ಜನಾರ್ದನ ದೇಗುಲದ ಆಡಳಿತ ಮೊಕ್ತೇಸರ ವಿಜಯರಾಘವ ಪಡುವಣ್ಣಾಯರಿಗೆ ಮೊಕ್ತೇಸರ ಸಂಮಾನ, ಖ್ಯಾತ ಸ್ತ್ರೀವೇಷ ಕಲಾವಿದ ಪುಂಡರೀಕಾಕ್ಷ ಉಪಾಧ್ಯಾಯರಿಗೆ ಕಲಾವಿದ ಸಂಮಾನ, ಮುಂಡ್ಕೂರು ದೇಗುಲದ ಜಯರಾಮ ಆಚಾರ‍್ಯರಿಗೆ ಅರ್ಚಕ ಸಂಮಾನ ನೀಡಿ ಗೌರವಿಸಲಾಯಿತು. ಸಾಧಕರಾದ ಉಮೇಶರಾವ್ ಎಕ್ಕಾರು, ಮೋನಪ್ಪ ಶೆಟ್ಟಿ, ರತ್ನಾಕರ ಶೆಟ್ಟಿ, ದೇವಪ್ರಸಾದ ಪುನರೂರು, ಸುಮಿತ್ ಕುಮಾರ್, ಶ್ರೀಹರಿ ಭಟ್‌ರನ್ನು ಅಭಿನಂದಿಸಲಾಯಿತು.

ಪ್ರಥಮ ಚಿಕಿತ್ಸೆಯ ಮಾಹಿತಿ


ಕಟೀಲು ಪ.ಪ. ಕಾಲೇಜಿನಲ್ಲಿ ಕಿನ್ನಿಗೋಳಿ ರೋಟರಿ, ಬಜಪೆ ರೋಟರಿ, ರೆಡ್ ಕ್ರಾಸ್ ಸಂಸ್ಥೆಗಳ ಸಹಬಾಗಿತ್ವದಲ್ಲಿ ಇಂಟರ‍್ಯಾಕ್ಟ್ ಮಾಹಿತಿ ಶಿಬಿರ ಜರಗಿತು. ಡಾ ರಾಮಚಂದ್ರ ಭಟ್ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಜಯರಾಮ ಪಂಜ, ರೋಟರಿಯ ಸತೀಶ್ಚಂದ್ರ ಹೆಗ್ಡೆ, ಗೋಪಿನಾಥ್ ಹೆಗ್ಡೆ, ರಾಬರ್ಟ್,ಕೆ.ಬಿ. ಸುರೇಶ್ ರೆಡ್ ಕ್ರಾಸ್‌ನ ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.

Sunday, September 19, 2010

SILVER JUBILEE COMMITTEE

SILVER JUBILEE COMMITTEE

Sri Durgaparameshwari Temple P.U.College

Kateel 574148, Ph: 0824-2200270

Respected Sir/Madam,

Kateel, D.K.District’s one of the holy places is not only known for its religious activities but also for imparting free and quality education from K.G. to P.G.

In 1984 the high School was upgraded to P.U.College on account of the ceaseless effort of the then Managing Trustee, Dr.K.Shamba Shetty, Pradhan Archak Sri K.Gopalakrishina Asranna and Endowment Minister Sri K.Amarnatha Shetty. Sri Vasudeva Mugeraya was at the helm of affairs as the founder Principal. The Institution had only Commerce section at the beginning. Under the tenure of Mr.Jayarama Shetty, Principal, Arts and Science section were also added to it.

At present, there are two sections each in Arts and Commerce and one section in Science with a student-strength of more than 1500. Since 2004 Mr.Jayarama Poonja the Principal his best striving hard for the all round progress of the institution. The institution has recorded overall 90% results in the last 25 years. It is also recognized for its unbeatable achievement in the field of sports. Generous donation from some of the philanthropists enabled to fulfil some of the needs of the Institution such as sports pavilion, name-board near the main entrance, connecting tar road, drinking water facility, interlocks, interior of the new building folklore museum etc.

This year the Institution is celebrating its Silver Jubilee. In order to mark the occasion a memorable one, under the guidance of Sri Prabhuling Kavalikatti K.A.S., the Temple Administrator, a silver jubilee committee has been formed consisting of eminent personalities such as Sri K.Abhayachandra Jain Local M.L.A., Sri Nalin Kumar Kateel, M.P., Sri Chittaranjan Rai Padu industrialist and an old student, some of the well-wishers, Old Students and members of the P.T.A. The committee decided to celebrate the Silver Jubilee grandly.

Though the Institution has had some of the basic amenities it lacks the most important one i.e. Auditorium. The School doesn’t have an Auditorium which can accommodate all the 1500 students at a time. So the committee decided to construct an open Air Auditorium which could accommodate more than 2000 people. It is also estimated that this would cost about Rs.30 lakhs. Fortunately, some of the philanthropists have already come forward to donate generously for this noble cause. We believe that our dream of having an auditorium won’t be realized without your encouragement and support.

So, we earnestly request you to donate generously and make our dream project a real one. You may remit the amount directly to the Silver Jubilee account at Kateel Vijaya Bank bearing A/c No.111401011000113

The committee also decided to:

· Display the names of the donor beneath the name of the Auditorium who donates more than Rs.5 lakhs

· A part of the Auditorium will be named after the donor who donates more than Rs.2 lakhs.

· Names of the donors, who donate more than Rs. 1 lakh, will be displayed in marbles in the front part of the Auditorium.

· Names of the donors will be displayed inside the Auditorium who donates more than Rs. 10,000.

Being the humble devotees of the Goddess Durga we earnestly look forward your helping hand in our new venture.

Nalin Kumar Kateel, M.P. Abhayachandra Jain, MLA, Prabhuling Kavalikatte,KAS Chitharanjan Rai

Honorary President President Administrator Kateel Temple & College Working President Treasurer

Jayarama Poonja Gopinath Hegde Sathish Bhat and K.V.Shetty

Secretary Joint Secretary Co-Treasurer.

Teaching and Non-Teaching Staff, Parents & students,

old students and executive committee members and local people.

Friday, September 17, 2010

ಕಟೀಲಿನ ನಂದಿನೀ ನದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಬಾರದೇಕೆ?

ನದೀ ಮಧ್ಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉಪಯೋಗಕ್ಕೆ ಸುತ್ತಲೂ ಹರಿಯುವ ನಂದಿನೀ ನದಿಯಿಂದಲೇ ವಿದ್ಯುತ್ ಉತ್ಪಾದನೆ ಮಾಡಬಾರದೇಕೆ?
ಇಂತಹದ್ದೊಂದು ಪ್ರಶ್ನೆಯನ್ನಿಟ್ಟುಕೊಂಡರೆ; ನಿರಂತರ ಹತ್ತು ತಿಂಗಳಲ್ಲಿ 25ಕಿಲೋವ್ಯಾಟ್ ವಿದ್ಯುತ್ ಪಡೆಯುವುದು ಕಷ್ಟವೇ ಅಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಈಗಾಗಲೇ 277ಕಡೆಗಳಲ್ಲಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಿರುವ ಶೃಂಗೇರಿ ಜಯಪುರದ ಜಿ.ಕೆ.ರತ್ನಾಕರ್.
ಕಟೀಲು ದೇಗುಲದಲ್ಲಿ ೭೦ಕಿಲೋವ್ಯಾಟ್‌ನ 3 ಜನರೇಟರ್‌ಗಳು ಇವೆ. ಇಷ್ಟು ಸಾಕಾಗುವುದಿಲ್ಲವೆಂದು ನೂರು ಕಿಲೋವ್ಯಾಟ್ ವಿದ್ಯುತ್ ಸಾಮರ್ಥ್ಯದ ಜನರೇಟರ್ ಪರಿಶೀಲನೆಯಲ್ಲಿದೆ. ನಾಲ್ಕು ವಿದ್ಯಾ ಸಂಸ್ಥೆಗಳಲ್ಲಿ 25ಕಿಲೋ ವ್ಯಾಟ್ ವಿದ್ಯುತ್ ಖರ್ಚಾಗುತ್ತದೆ. ಮಾಸ್ಟರ್ ಪ್ಲಾನ್ ಬಳಿಕ ನೂರು ಕೋಣೆಗಳ ವಸತಿಗೃಹ, ಅಡಿಟೋರಿಯಂ ಇತ್ಯಾದಿ ಕಟ್ಟಡಗಳಾದರೆ ಇನ್ನಷ್ಟು ವಿದ್ಯುತ್ ಬೇಕಾಗುತ್ತದೆ. ಅಂದರೆ 100 ಕಿಲೋವ್ಯಾಟ್ ವಿದ್ಯುತ್ ಕಟೀಲು ದೇವಸ್ಥಾನ ಹಾಗೂ ಸಹಸಂಸ್ಥೆಗಳಿಗೆ ಬೇಕಾಗುತ್ತದೆ. ಈಗಾಗಲೇ ವಾರ್ಷಿಕ ಹತ್ತು ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಹಣವನ್ನು ವಿದ್ಯುತ್‌ಗಾಗಿಯೇ ಕಟೀಲು ದೇಗುಲ ಭರಿಸುತ್ತಿದೆ.
ಇಂತಹ ಹಿನ್ನಲೆಗಳಿರುವಾಗ ವೇಗದಿಂದ ಹರಿಯುವ ನಂದಿನೀ ನದಿಯಲ್ಲೇ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಕೈಗೊಂಡರೆ ಉತ್ತಮ ಎಂದು ಅಭಿಪ್ರಾಯ ಪಡುತ್ತಾರೆ ಕಿನ್ನಿಗೋಳಿಯ ತಮ್ಮ ಮನೆಯ ತೋಟದಲ್ಲಿ ಹರಿಯುವ ತೋಡಿನ ನೀರಿಗೆ ಟರ್ಬ್‌ನೈರ್ ಇಟ್ಟು ೨ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿರುವ ಜಿ.ಪಂ.ಸದಸ್ಯ ಪ್ರಮೋದ್ ಕುಮಾರ್.
ಕಟೀಲಿನಲ್ಲಿ ದೇಗುಲದ ಎದುರು ಕಟ್ಟಲಾಗಿರುವ ಕಿಂಡಿ ಅಣೆಕಟ್ಟನ್ನು ಮತ್ತು ಅದರಲ್ಲಿ ಹರಿಯುತ್ತಿರುವ ನೀರಿನ ವೇಗವನ್ನು ಶುಕ್ರವಾರ ಗಮನಿಸಿರುವ ರತ್ನಾಕರ್ ಪ್ರಕಾರ ಟರ್ಬನೈರ್ ಮೂಲಕ 25ರಿಂದ 50ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಸುಮಾರು ನೂರು ಮೀಟರ್ ದೂರದಲ್ಲಿ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪು ಮೂಲಕ ವೇಗವಾಗಿ ಹರಿಸಿದರೆ 4 ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ 3-4 ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತನ್ನು ಆರು ತಿಂಗಳ ಕಾಲ ನಿರಂತರ ಆರಾಮವಾಗಿ ಪಡೆಯಬಹುದು.
ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣರಲ್ಲಿ ಅಭಿಪ್ರಾಯ ಕೇಳಿದಾಗ, ಭಕ್ತರಿಂದಲೂ ಈ ಬಗ್ಗೆ ಸಲಹೆಗಳು ಬಂದಿವೆ. ದೇಗುಲದ ಆಡಳಿತಾಧಿಕಾರಿಯವರಲ್ಲಿ ನದಿ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಬಗ್ಗೆ ನಿವೇದನೆ ಮಾಡಿಕೊಡಲಾಗುವುದು. ಇದರಿಂದ ದೇಗುಲಕ್ಕೂ ಲಾಭವಿದೆ. ನೀರಿನ ಸದುಪಯೋಗವೂ ಆಗುತ್ತದೆ ಎಂದು ಹೇಳಿದರು.

Sunday, September 12, 2010

ಕ್ರಷಿ ಋಷಿ ಪ್ರಶಸ್ತಿ ಪ್ರದಾನ











ಕಟೀಲು ಕಲಾದೇಗುಲ ಸಂಸ್ಥೆಯ ವತಿಯಿಂದ ಕೊಡೆತ್ತೂರಿನ ಗಿರಿಯಪ್ಪ ಮತ್ತು ಮೇಲೆಕ್ಕಾರಿನ ಆನಂದ ಶೆಟ್ಟರಿಗೆ ಕ್ರಷಿ ಋಷಿ ಪ್ರಶಸ್ತಿಯನ್ನು ಸ.12ರಂದು ಕಟೀಲು ಶಾಲಾ ಸರಸ್ವತೀ ಸದನದಲ್ಲಿ ನಡೆದ ಸಮಾರಂಭದಲ್ಲಿ ಸಾಂಸ ನಳಿನ್ ಕುಮಾರ್ ನೀಡಿ ಅಭಿನಂದಿಸಿದರು.



ಸಂಘಟಕ ಚಂದ್ರಕಾಂತ ನಾಯಕ್, ಭಾಸ್ಕರದಾಸ ಎಕ್ಕಾರು, ಭುವನಾಭಿರಾಮ ುಡುಪ, ಕೆ.ಪಿ.ಮಲ್ಯ, ಸಾಯಿನಾಥ ಶೆಟ್ಟಿ, ಜಯಪಾಲ ಶೆಟ್ಟಿ ಮತ್ತಿತರರಿದ್ದರು.



ಚಂದ್ರಕಾಂತ ನಾಯಕ್ ಮತ್ತು ತಂಡದವರಿಂದ ಭಕ್ತಗೀತೆ ರಸಮಂಜರಿ ನಡೆಯಿತು.



Friday, September 10, 2010

ಕಟೀಲಿನಲ್ಲಿ ಭಕ್ತರ ಸಾಲು ಮತ್ತು ಚಪ್ಪಲು ರಾಶಿ























ಕಟೀಲಿನಲ್ಲಿ ಸಿಂಹ ಮಾಸದ ಕೊನೆಯ ಶುಕ್ರವಾರ(ಸ.೧೦) ಜಾತ್ರೆಯ ದಿನಕ್ಕಿಂತಲೂ ಹೆಚ್ಚು ಮಂದಿ ಭಕ್ತರು ಆಗಮಿಸಿದ್ದರು.
ಜನ ಸಂದಣಿಗೆ ಸಾಕ್ಷಿಯೆಂಬಂತೆ ಸಾವಿರಾರು ಚಪ್ಪಲುಗಳ ರಾಶಿ!

Wednesday, September 8, 2010

Katil Nandini River ABBARA



























ಸಿಂಹ ಮಾಸದಲ್ಲಿ ಕಟೀಲು


ಕಟೀಲಿನಲ್ಲಿ ಸಾವಿರಸಾವಿರ ಸಂಖ್ಯೆಯಲ್ಲಿ ಭಕ್ತರನ್ನು ಕಾಣಲು ಸಾಧ್ಯವಾಗುವುದು ಸಿಂಹ ಮಾಸದಲ್ಲಿ(ಸೋಣ ತಿಂಗಳು).
ಶುಕ್ರವಾರಗಳಲ್ಲಂತೂ ಜನವೋಜನ. ಈ ದಿನಗಳಲ್ಲೇ ದಾಖಲೆಯ ಸಂಖ್ಯೆಯ ಹೂವಿನ ಪೂಜೆ ನಡೆಯುವುದು. ಕಳೆದ ಬಾರಿ ಐದೂವರೆ ಸಾವಿರ ಹೂವಿನ ಪೂಜೆಯ ಸೇವೆ ನಡೆದಿತ್ತು. ಅದು ಈ ಬಾರಿ ಅಂದರೆ ಸ.10ರ ಶುಕ್ರವಾರ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.


Tuesday, September 7, 2010

ಪದವೀಪೂರ್ವ ಕಾಲೇಜಿನಲ್ಲಿ ಗುರುವಂದನೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭ ವಿದ್ಯಾರ್ಥಿಗಳು ಗುರುವಂದನೆ ನೆರವೇರಿಸಿದರು.

ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಚಾರ್ಯ ಸುರೇಶ್ ಭಟ್ ಸೇರಿದಂತೆ ಎಲ್ಲ ಉಪನ್ಯಾಸಕರು ವೇದಿಕೆಯಲ್ಲಿದ್ದರು.

ಚಿತ್ರ ಕ್ರಪೆ: ರಘುನಾಥ ಕಾಮತ್

Sunday, September 5, 2010

ಮಕ್ಕಳ ಯಕ್ಷಗಾನ ಸ್ಪರ್ಧೆ : ಕದ್ರಿ, ಕಲ್ಲಡ್ಕ ತಂಡಗಳಿಗೆ ಪ್ರಶಸ್ತಿ













ಕಟೀಲುವಿನ ಶಾಲಾ ಸರಸ್ವತೀ ಸದನದಲ್ಲಿ ಭಾನುವಾರ(ಸ.೫) ನಡೆದ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಶ್ರೀ ಕೃಷ್ಣ ಲೀಲೆ ಪ್ರದರ್ಶಿಸಿದ ಕದ್ರಿಯ ಬಾಲ ಯಕ್ಷ ಕೂಟ ಪ್ರಥಮ ಹಾಗೂ ವೀರಬಬ್ರುವಾಹನ ಪ್ರದರ್ಶಿಸಿದ ಕಲ್ಲಡ್ಕದ ಚೈತನ್ಯ ಕಲಾ ವೇದಿಕೆ ದ್ವಿತೀಯ ಪ್ರಶಸ್ತಿಯನ್ನು ಗೆದ್ದುಕೊಂಡಿವೆ.
ಅತ್ಯುತ್ತಮ ಪುಂಡುವೇಷದಲ್ಲಿ ಕಲ್ಲಡ್ಕದ ಚಿನ್ಮಯ, ಸ್ತ್ರೀವೇಷಕ್ಕೆ ಕದ್ರಿಯ ಅಶ್ವಿನಿ ಮಯ್ಯ, ಹಾಸ್ಯಕ್ಕೆ ಕದ್ರಿಯ ಶ್ರೀನಿಧಿ ರಾವ್, ಬಣ್ಣದ ವೇಷಕ್ಕೆ ಕದ್ರಿಯ ಆಕಾಶ ಎನ್, ಶ್ರೀಪ್ರಿಯಾ, ರಾಜವೇಷಕ್ಕೆ ಮಂಜನಾಡಿ ದುರ್ಗಾಪರಮೇಶ್ವರೀ ಯಕ್ಷಕಲಾ ಕಂದ್ರದ ಆವ್ಯತಾ, ಪೋಷಕ ಪಾತ್ರಕ್ಕೆ ಕಳಸ ಹಳುವಳ್ಳಿಯ ಸುಬ್ರಹ್ಮಣ್ಯೇಶ್ವರ ತಂಡದ ಕೆ.ಎ.ಲಾಸ್ಯ ಪ್ರಶಸ್ತಿ ಪಡೆದರು.
ಶ್ರೀ ದುರ್ಗಾ ಮಕ್ಕಳ ಮೇಳದ ಎರಡನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಿದ ಯಕ್ಷಗಾನ ಬಯಲಾಟ ಅಕಾಡಮಿಯ ಕುಂಬ್ಳೆ ಸುಂದರ ರಾವ್, ಯಕ್ಷಗಾನ ಮುಗಿದು ಹೋಗುತ್ತಿದೆ ಎಂಬುದು ಸುಳ್ಳು. ಭವ್ಯ ಭವಿತವ್ಯ ಇದೆ ಎಂಬುದಕ್ಕೆ ನೂರಾರು ಮಕ್ಕಳು ಯಕ್ಷಗಾನಗಳಲ್ಲಿ ತೊಡಗಿಕೊಂಡಿರುವುದೇ ಸಾಕ್ಷಿ ಎಂದು ಹೇಳಿದರು.
ಇದೇ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್‌ರನ್ನು ಸಂಮಾನಿಸಲಾಯಿತು. ಪು.ಶ್ರೀನಿವಾಸ ಭಟ್, ಕಟೀಲು ರಮಾನಂದ ರಾಯರನ್ನು ಗೌರವಿಸಲಾಯಿತು.
ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ.ಜಯರಾಂ ಭಟ್, ಮೂಡುಬಿದ್ರೆ ಆಳ್ವಾಸ್ ಸಂಸ್ಥೆಯ ಡಾ.ಮೋಹನ ಆಳ್ವ, ಬಳ್ಳಾರಿಯ ಉದ್ಯಮಿ ಕಳತ್ತೂರು ಸುರೇಶ್ ಶೆಟ್ಟಿ, ಮುರಳೀಧರ ಕಡೇಕಾರ್, ಮುಂಬೈನ ಎಚ್.ಬಿ.ಎಲ್.ರಾವ್, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಉಪಪ್ರಾಚಾರ್ಯ ಸುರೇಶ್ ಭಟ್, ಮುಖ್ಯ ಶಿಕ್ಷಕಿ ವೈ.ಮಾಲತಿ, ಕೆ.ಪಿ.ಮಲ್ಯ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದುರ್ಗಾ ಮಕ್ಕಳ ಮೇಳದ ಕಲಾವಿದರಂದ ಯಕ್ಷಗಾನ ಬಯಲಾಟ ನಡೆಯಿತು.

ಕಟೀಲು ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ


ಕಟೀಲು ವಿವಿಧೋದ್ಧೇಶ ಸಹಕಾರಿ ಸಂಘದ ಮಹಾಸಭೆ ಸ.4ರಂದು ಕಟೀಲಿನ ಸ್ಔಂದರ್ಯ ಪ್ಯಾಲೇಸ್ನಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಶಶಿಧರ ಶೆಟ್ಟಿ, ನಿರ್ಧೇಶಕರಾದ ಸಂಜೀವ ಮಡಿವಾಳ, ವೆಂಕಟೇಶ ಉಡುಪ, ಆನಂದಯಾರ ಪೈ, ಯಶೋದಾ, ಶ್ರೀಶಾಚಾರ್ಯ, ವಸಂತ್, ಲಕ್ಷ್ಮಣ್ ಶೆಟ್ಟಿ, ಕಾರ್ಯದರ್ಶಿ ಕುಮುದಾಕ್ಷಿ, ಉಷಾ ಆಚಾರ್ಯ ಮತ್ತಿತರರಿದ್ದರು.

ಗಿಡಿಗೆರೆ ಜೀರ್ಣೋದ್ಧಾರ ಸಮಿತಿ ಕಚೇರಿ ಉದ್ಘಾಟನೆ

ಕಟೀಲಿನ ಗಿಡಿಗೆರೆ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಕಚೇರಿಯನ್ನು ಸ.5ರಂದು ಉದ್ಘಾಟಿಸಲಾಯಿತು. ವಾಸುದೇವ ಆಸ್ರಣ್ಣ, ಕೇಶವ ಕಟೀಲು, ಬಾಸ್ಕರ ಭಟ್ ಸೋಂದಾ, ಭುವನಾಭಿರಾಮ ಉಡುಪ, ಪುರುಷೋತ್ತಮ ಶೆಟ್ಟಿ, ಲೋಕಯ್ಯ ಮತ್ತಿತರರಿದ್ದರು.

ಕಟೀಲಿನಲ್ಲಿ ಮಕ್ಕಳ ಯಕ್ಷಗಾನ ಸ್ಪರ್ಧೆ ಪೂರ್ವರಂಗ ಪ್ರದರ್ಶನ























ಕಟೀಲಿನಲ್ಲಿ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯ ಮುಂಚೆ ಸ್ಥಳೀಯ ಶ್ರೀ ದುರ್ಗಾ ಮಕ್ಕಳ ಯಕ್ಷಗಾನ ಮೇಳದ ಕಲಾವಿದರಿಂದ ಪೂರ್ವರಂಗ ಪ್ರದರ್ಶನ ಕಂಡಿತು.

Saturday, September 4, 2010

ಕಟೀಲು ಪದವೀಪೂರ್ವ ಕಾಲೇಜು ಶಿಕ್ಷಕ ರಕ್ಷಕ ಸಂಘದ ಮಹಾ ಸಭೆ


ಶಾಲೆ, ಕಾಲೇಜುಗಳಿಗೆ ಕಳುಹಿಸಿದಾಕ್ಷಣ ತಮ್ಮ ಕರ್ತವ್ಯ ಮುಗಿಯಿತೆಂದು ತಿಳಿಯದೆ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಗಮನ ಇರಿಸಬೇಕೆಂದು ನಿಟ್ಟೆ ವಿದ್ಯಾಸಂಸ್ಥೆಯ ಸುಧೀರ್‌ರಾಜ್ ಹೇಳಿದರು.

ಅವರು ಸ.4ರ ಶನಿವಾರ ಕಟೀಲು ದೇವಳ ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಕರಕ್ಷಕ ಸಂಘದ ಮಹಾಸಭೆಯಲ್ಲಿ ಉಪನ್ಯಾಸವಿತ್ತರು.

ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶಿಕ್ಷಕರಕ್ಷಕ ಸಂಘದ ರಾಮಚಂದ್ರ ಶೆಟ್ಟಿ, ರಾಘವೇಂದ್ರ ಭಟ್, ಸುಮಂಗಲಾ ಆರ್. ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಾಚಾರ್ಯ ಸುರೇಶ್ ಭಟ್ ಮತ್ತಿತರರಿದ್ದರು.

ಭಾರತೀ ಎಸ್ . ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸುಮಾರು ಏಳುನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು. ಉಪನ್ಯಾಸಕರು ಸಭೆಗೆ ತಮ್ಮ ಪರಿಚಯ ಹೇಳಿದರು.