Tuesday, August 31, 2010

ತಾ.೫: ಕಟೀಲಿನಲ್ಲಿ ಮಕ್ಕಳ ಯಕ್ಷಗಾನ ಸ್ಪರ್ಧೆ

ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಶಾಲಾ ಸರಸ್ವತೀ ಸದನದಲ್ಲಿ ಸ.೫ರಂದು ಮಕ್ಕಳ ತೆಂಕುತಿಟ್ಟು ಯಕ್ಷಗಾನ ಬಯಲಾಟ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಗಂಟೆ ೮.೪೫ರಿಂದ ಆರಂಭವಾಗುವ ಸ್ಪರ್ಧೆಯಲ್ಲಿ ಉಲ್ಲಂಜೆ ದ.ಕ.ಜಿ.ಪಂ.ಶಾಲೆಯ ವಿದ್ಯಾರ್ಥಿಗಳು ಸುಧನ್ವಾರ್ಜುನ, ಮುನ್ನೂರು ಚಿಣ್ಣರಲೋಕ ಸೇವಾ ಟ್ರಸ್ಟ್‌ನ ಮಕ್ಕಳು ಸುದರ್ಶನ ವಿಜಯ, ಕದ್ರಿ ಬಾಲ ಯಕ್ಷಕೂಟದ ಸದಸ್ಯರು ಶ್ರೀ ಕೃಷ್ಣ ಲೀಲೆ, ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿದ್ಯುನ್ಮತಿ ಕಲ್ಯಾಣ, ಕಲ್ಲಡ್ಕ ಚೈತನ್ಯ ಕಲಾವೇದಿಕೆಯವರು ವೀರ ಬಬ್ರುವಾಹನ, ಮಂಜನಾಡಿ ಶ್ರೀ ದುರ್ಗಾಪರಮೇಶ್ವರೀ ಕೃಪಾಶ್ರಿತ ಯಕ್ಷಕಲಾ ಕೇಂದ್ರದವರಿಂದ ಲವ ಕುಶ, ಕಳಸ ಹಳುವಳ್ಳಿಯ ಶ್ರೀ ಸುಬ್ರಹ್ಮಣ್ಯೇಶ್ವರ ಮಕ್ಕಳ ಯಕ್ಷಗಾನ ತಂಡ ಸುಧನ್ವ ಮೋಕ್ಷವನ್ನು ಪ್ರದರ್ಶಿಸಲಿದ್ದಾರೆ.ಕಟೀಲಿನಲ್ಲಿ ದುರ್ಗಾ ಮಕ್ಕಳ ಮೇಳದಿಂದ ಕಳೆದೆರಡು ವರುಷಗಳಿಂದ ಉಚಿತವಾಗಿ ಹಿಮ್ಮೇಳ, ಮುಮ್ಮೇಳ ತರಗತಿಗಳನ್ನು ನಡೆಸಲಾಗುತ್ತಿದ್ದು, ಅಂದು ಸಂಜೆ ನಡೆಯಲಿರುವ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಯಕ್ಷಗಾನ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಗುವುದು.
ಕರ್ನಾಟಕ ಬ್ಯಾಂಕಿನ ಪಿ.ಜಯರಾಮ ಭಟ್, ಯಕ್ಷಗಾನ ಅಕಾಡಮಿಯ ಕುಂಬ್ಳೆ ಸುಂದರ ರಾವ್, ಡಾ.ಮೋಹನ ಆಳ್ವ, ಐಕಳ ಹರೀಶ ಶೆಟ್ಟಿ, ಕಳತ್ತೂರು ಸುರೇಶ ಶೆಟ್ಟಿ, ಮುಂಬೈ ಕಸಾಪದ ಎಚ್.ಬಿ.ಎಲ್.ರಾವ್, ಯಕ್ಷಗಾನ ಕಲಾರಂಗದ ಮುರಳಿ ಕಡೇಕಾರ್, ಎಕ್ಕಾರು ಮೋನಪ್ಪ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅನಂತ ಆಸ್ರಣ್ಣ, ವಾಸುದೇವ ಆಸ್ರಣ್ಣರ ಉಪಸ್ಥಿತಿಯಲ್ಲಿ ಡಾ.ಕೋಳ್ಯೂರು ರಾಮಚಂದ್ರ ರಾವ್‌ರಿಗೆ ಸಂಮಾನ, ಪು.ಶ್ರೀನಿವಾಸ ಭಟ್, ಕಟೀಲು ರಮಾನಂದ ರಾವ್‌ರಿಗೆ ಗೌರವಾರ್ಪಣೆ ನಡೆಯಲಿದೆ

Sunday, August 29, 2010

ತಾಳಮದ್ದಲೆ ಸಪ್ತಾಹ ಸಮಾರೋಪ





ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ನಡೆಯುತ್ತಿದ್ದ ತಾಳಮದ್ದಲೆ ಸಪ್ತಾಹ ಭಾನುವಾರ( 29) ಸಮಾರೋಪಗೊಂಡಿತು.

Wednesday, August 25, 2010

ಕಟೀಲು ಮೆರವಣಿಗೆ ಸಮಿತಿಯಿಂದ ಹುಲಿ ವೇಷ, ಟ್ಯಾಬ್ಲೋ ಸ್ಪರ್ಧೆಗಳು

ನವರಾತ್ರಿ ತೃತೀಯ ದಿನದ ಕಟೀಲು ಮೆರವಣಿಗೆ ಸಮಿತಿಯ ೨೫ನೇ ವರ್ಷದ ನವರಾತ್ರಿ ಮೆರವಣಿಗೆ ಸಲುವಾಗಿ ಅಕ್ಟೋಬರ್ ೧೦ರಂದು ಹುಲಿವೇಷ ಮತ್ತು ಟ್ಯಾಬ್ಲೋ ಸ್ಪರ್ಧೆಗಳು ನಡೆಯಲಿವೆ.

ಆಸಕ್ತ ತಂಡಗಳು ಸಪ್ಟಂಬರ್ ೧೦ರೊಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಬೇಕು. ಹುಲಿವೇಷ ಸ್ಪರ್ಧಾ ವಿಜೇತರಿಗೆ ಪ್ರಥಮ ರೂ. ೨೦ಸಾವಿರ, ದ್ವಿತೀಯ ರೂ. ೧೨ಸಾವಿರ, ಭಾಗವಹಿಸಿದ ಎಲ್ಲ ತಂಡಗಳಿಗೆ ಏಳು ಸಾವಿರ ರೂ. ಹಾಗೂ ಶಾಶ್ವತ ಫಲಕ ನೀಡಲಾಗುವುದು. ಅಲ್ಲದೆ ಹುಲಿವೇಷ ಟ್ಯಾಬ್ಲೋಗಳಿಗೆ ಪ್ರತ್ಯೇಕ ನಗದು ಬಹುಮಾನಗಳಿವೆ.ಅಲ್ಲದೆ ಟ್ಯಾಬ್ಲೋ(ಸ್ತಬ್ಧಚಿತ್ರ) ಸ್ಪರ್ಧೆಯಲ್ಲಿ ವಿಜೇತರಿಗೆ ರೂ.೨೫ಸಾವಿರ, ರೂ.೧೫ಸಾವಿರ ನಗದು ಬಹುಮಾನವಿದ್ದು, ಭಾಗವಹಿಸಿದ ತಂಡಗಳಿಗೆಲ್ಲ ಪ್ರೋತ್ಸಾಹಕ ನಗದು ಬಹುಮಾನಗಳಿವೆ.

ಆಸಕ್ತರು ಉಡುಪ ಮೆಡಿಕಲ್ಸ್, ಮುಖ್ಯ ರಸ್ತೆ ಕಟೀಲು, ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ, ೯೪೪೮೬೨೩೪೮೧, ೯೦೩೫೬೭೧೨೪೭ ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಯಕ್ಷಗಾನ ವೇಷಭೂಷಣ ಸಿದ್ಧತೆ


ಕಟೀಲು ದೇಗುಲದಿಂದ ಹೊರಡುವ ನಾಲ್ಕು ಯಕ್ಷಗಾನ ಮೇಳಗಳ ಸಂಖ್ಯೆ ಈ ಬಾರಿ ಐದಕ್ಕೇರುವ ಸಾಧ್ಯತೆಗಳಿವೆ.
ಮೇಳಗಳ ವೇಷಭೂಷಣಗಳನ್ನು ಸರಿಪಡಿಸುವ, ಹೊಸತಾಗಿಸುವ ಕಾರ್ಯ ನಡೆಯುತ್ತಿದೆ.

Monday, August 23, 2010

ಜಿಎಸ್‌ಬಿ ಸಭಾ ವಾರ್ಷಿಕೋತ್ಸವ


ಕಟೀಲಿನ ಜಿಎಸ್‌ಬಿ ಸಭಾದ ವಾರ್ಷಿಕೋತ್ಸವ ಭಾನುವಾರ ಶಾಲಾ ಸರಸ್ವತೀ ಸದನದಲ್ಲಿ ನಡೆಯಿತು. ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕ ಸುಜೀರ್ ಪ್ರಭಾಕರ್, ಸಾಹಿತಿ ಕೆ.ಜಿ.ಮಲ್ಯ, ಕೆ.ಪಿ.ಮಲ್ಯ, ಭಾರತೀ ಎಸ್. ಶೆಣೈ, ವಾಸುದೇವ ಶೆಣೈ ಉಪಸ್ಥಿತರಿದ್ದರು.

Thursday, August 19, 2010

ಉದ್ಯಾನವನ ನಿರ್ಮಾಣ




ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನ ನೂರ ಇಪ್ಪತ್ತೈದು ವಿದ್ಯಾರ್ಥಿಗಳು ಕಿನ್ನಿಗೋಳಿ ಮುರುಕಾವೇರಿಯಲ್ಲಿ ಶ್ರಮದಾನದ ಮುಲಕ ಉದ್ಯಾನವನ ಸ್ವಚ್ಛತೆ ಹಾಗೂ ಗಿಡಗಳನ್ನು ನೆಟ್ಟು ಅಂದವಾಗಿಸಿದರು.

ಕಟೀಲು ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮೂಡುಬಿದ್ರೆ ಆಳ್ವಾಸ್‌ನ ಡಾ. ಜಿ.ಎಚ್. ಪ್ರಭಾಕರ ಶೆಟ್ಟಿ ಆಗಸ್ಟ್ 19ರಂದು ನೆರವೇರಿಸಿದರು.
ಕಟೀಲು ದೇಗುಲದ ಆಡಳಿತಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಷ್ಣು ಪ್ರಸಾದ್, ಕಾರ್ಯದರ್ಶಿ ವಿಶ್ವೇಶ, ಉಪಾಧ್ಯಕ್ಷ ತುಷಾರ್, ಸಹಕಾರ್ಯದರ್ಶಿ ಪ್ರಣೀತಾ, ಉಪನ್ಯಾಸಕರಾದ ನಾಗೇಶ್ ರಾವ್, ಜಗದೀಶ್ಚಂದ್ರ ಕೆಕೆ ಮತ್ತಿತರರಿದ್ದರು.
ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಶ್ರೀಪೂರ್ಣ, ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು.

Wednesday, August 11, 2010

ಕಟೀಲಿನಲ್ಲಿ ತಾಳಮದ್ದಲೆ ಸಪ್ತಾಹ


ಕಟೀಲು ದೇಗುಲದ ಆಶ್ರಯದಲ್ಲಿ ಆಗಸ್ಟ್ 23ರಿಂದ 29ರತನಕ ದಿನಂಪ್ರತಿ ಸಂಜೆ ೪.30ರಿಂದ 8ರತನಕ ತಾಳಮದ್ದಲೆ ಸಪ್ತಾಹ ನಡೆಯಲಿದೆ.

Wednesday, August 4, 2010

ಶಾಲಾ ಸರಕಾರ ಉದ್ಘಾಟನೆ



ಶ್ರೀ ದುರ್ಗಾಪರಮೇಶ್ವರೀ ದೇವಳ ಪ.ಪೂ.ಕಾಲೇಜಿನಲ್ಲಿ ಶಾಲಾ ಸರಕಾರವನ್ನು ಹೊನ್ನಕಟ್ಟೆ ಎಂಡಿಎಸ್ ಕಾಲೇಜಿನ ಉಪನ್ಯಾಸಕ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಪ್ರಾಚಾರ‍್ಯ ಜಯರಾಮ ಪೂಂಜ, ಉಪಪ್ರಾಚಾರ‍್ಯ ಸುರೇಶ್ ಭಟ್, ಭಾರತೀ ಶೆಟ್ಟಿ, ಅಲೆಕ್ಸ್ ತಾವ್ರೋ ವೇದಿಕೆಯಲ್ಲಿದ್ದರು.